ಪಿ. ಮಹಮ್ಮದ್ (P Mohammed)

ಪಡುಬಿದ್ರಿ: ಗ್ರಾಮ ಕರಣಿಕರ ಕಚೇರಿ ಪಡುಬಿದ್ರಿಯಲ್ಲಿ ಸುಮಾರು 33 ವರ್ಷಗಳ ಕಾಲ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದ ಪಡುಬಿದ್ರಿ ಬೇಂಗ್ರೆ ನಿವಾಸಿ ಪಿ. ಮಹಮ್ಮದ್(73) ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು.

ಪಡುಬಿದ್ರಿಯಲ್ಲಿ `ಗೋಲಿ ಸೋಡಾ’ ವ್ಯವಹಾರವನ್ನೂ ನಡೆಸಿಕೊಂಡಿದ್ದ ಇವರು ಸೈಕಲ್ ಮೂಲಕವೇ ಸೋಡಾ ಮಾರಾಟವನ್ನು ಅಂದಿನ ಕಾಲದಲ್ಲಿ ನಡೆಸುತ್ತಿದ್ದರು.

ಅವರಿಗೆ ಪತ್ನಿ,ಎರಡು ಪುತ್ರ,ಎರಡು ಪುತ್ರಿ ಇದ್ದಾರೆ.

Leave a Reply

Your email address will not be published. Required fields are marked *