ಪಲಿಮಾರು ಲಿಲ್ಲಿ ರಾಮದಾಸ ಪ್ರಬು ಚಾರಿಟೇಬಲ್ ಟ್ರಸ್ಟ್‍ನಿಂದ 20ನೇ ವರ್ಷದ ವಿದ್ಯಾರ್ಥಿವೇತನ

ಪಲಿಮಾರಿನ ಲಿಲ್ಲಿ ರಾಮದಾಸ ಪ್ರಭು ಶೈಕ್ಷಣಿಕ ಮತ್ತು ಚೇರಿಟೆಬಲ್ ಟ್ರಸ್ಟ್(ರಿ)ನಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ 20ನೇ ವರ್ಷದ ಕಾರ್ಯಕ್ರಮವು ಶ್ರೀಭುವನೇಂದ್ರ ತೀರ್ಥ ಕಲ್ಯಾಣ ಮಂಟಪದಲ್ಲಿ ಆಗಸ್ಟ್ ಭಾನುವಾರ ನಡೆಯಿತು.
ಉಡುಪಿ ಎಂ.ಜಿ.ಎಂ. ಕಾಲೇಜಿನ ರಾಜ ನೀತಿ ಶಾಸ್ತ್ರ ಪ್ರಾಧ್ಯಾಪಕರಾದ ಪೆÇ್ರೀ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಬದುಕನ್ನು ಓದಿ ಮತ್ತು ಕೌಶಲಾಧಾರಿತ ಜ್ಞಾನವನ್ನು ಪಡೆಯಬೇಕು ಅಂಕಗಳನ್ನು ಪಡೆಯುವಷ್ಟೇ ಮುಖ್ಯವಾದದು ಬದುಕಿನ ಸವಾಲುಗಳನ್ನೆದುರಿಸುವ ಸಾಮಥ್ರ್ಯವನ್ನು ಪಡೆಯುವುದು. ಆತ್ಮವಿಶ್ವಾಸ ಸಾಧಕರ ಅತ್ಯುನ್ನತವಾದ ಆಯುಧವಾಗಬಲ್ಲದು ಎಂದವರು ಹೇಳಿದರು.

20 ವರ್ಷಗಳಿಂದ ಶಿಕ್ಷಣದ ಮಹೋದ್ದೇಶಕ್ಕಾಗಿ ತನ್ನ ಸಂಪತ್ತಿನ ಬಹು ದೊಡ್ಡ ಭಾಗವನ್ನು ವಿನಿಯೋಗಿಸುತ್ತಿರುವ ರಾಮದಾಸ ಪ್ರಭು ಹಾಗೂ ಲಿಲ್ಲಿ ರಾಮದಾಸ ಪ್ರಭು ದಂಪತಿಗಳನ್ನು ಅವರು ಅಭಿನಂದಿಸಿದರು.

ಏಳನೇ ತರಗತಿ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ, ಡಿಪೆÇ್ಲೀಮಾ, ಸ್ನಾತಕೋತರ, ವೈದ್ಯಕೀಯ, ಡೆಂಟಲ್, ಇಂಜಿನಿಯರಿಂಗ್ ತರಗತಿಗಳಲ್ಲಿ ಕಲಿಯುತ್ತಿರುವ 324 ವಿದ್ಯಾರ್ಥಿಗಳಿಗೆ ಮೂರು ಲಕ್ಷದ ತೊಂಭತ್ತು ಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನಗಳನ್ನು ಈ ವೇದಿಕೆಯಲ್ಲಿ ವಿತರಿಸಲಾಯಿತು.

ವೈದ್ಯಕೀಯ ವೆಚ್ಚ ನೀಡಿಕೆ: ಇದೇ ಸಂದರ್ಭದಲ್ಲಿ 9 ಜನರ ವೈದ್ಯಕೀಯ ಶುಶ್ರೂಷೆಗಾಗಿ ಧನ ಸಹಾಯವನ್ನು ವಿತರಿಸಲಾಯಿತು.
ಮುಂದಿನ ವರ್ಷ ಈ ವಿದ್ಯಾರ್ಥಿ ವೇತನಗಳ ಮೊತ್ತವನ್ನು ಹೆಚ್ಚಿಸುವುದಾಗಿ ರಾಮದಾಸ ಪ್ರಭು ಭರವಸೆ ನೀಡಿದರು.
ಲಯನ್ಸ್ ಉಪರಾಜ್ಯಪಾಲರಾದ ಲಯನ್ಸ್ ಎನ್.ಎಂ.ಹೆಗ್ಡೆ, ಕಾರ್ಕಳ ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆಗಳ ಪಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರು, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಪ್ರಾದ್ಯಾಪಕಿ ಜ್ಯೋತಿ ಪದ್ಮನಾಭ ಸಮಾರಂಭದ ಅತಿಥಿಗಳಾಗಿದ್ದರು.

ಸನ್ಮಾನ: ವಿದ್ಯಾರ್ಥಿ ಸಾಧಕರಾದ ರಾಷ್ಟ್ರಮಟ್ಟದ ಭಾಷಣಕಾರ ಶ್ರೇಯಸ್ ಜಿ. ಕೋಟ್ಯಾನ್, ಕನ್ನಡ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಸಿ. ಅವರನ್ನು ಟ್ರಸ್ಟ್‍ನ ವತಿಯಿಂದ ಸನ್ಮಾನಿಸಲಾಯಿತು. ಶೇ.100% ಫಲಿತಾಂಶ ಪಡೆದ ಪಲಿಮಾರು ಪಿಯು ಪ್ರಾಂಶುಪಾಲರಾದ ಗ್ರೇಟ್ಟಮೋರಶ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಟ್ರಸ್ಟಿಗಳಾದ ದಿನೇಶ್ ಪ್ರಭು, ಗಾಯತ್ರಿ ದಿನೇಶ್ ಪ್ರಭು, ಸತೀಶ್ ಪ್ರಭು, ರವೀಂದ್ರ ಪ್ರಭು, ಪಾಂಡುರಂಗ ಪ್ರಭು ವಿವಿದ ವಿದ್ಯಾರ್ಥಿವೇತನಗಳನ್ನು ವಿತರಿಸಿದರು.

ಜ್ಯೋತಿಷ್ಯ ವಿದ್ವಾನ್ ಶಂಭು ಗುರೂಜಿ ಅಭಿನಂದನಾಭಾಷಣಗೈದರು.
ಗಾಯತ್ರಿ ದಿನೇಶ್ ಪ್ರಭು ಪ್ರಾರ್ಥನೆಯೊಂದಿಗೆ ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರ್ವಹಣೆಗೈದು ವಂದಿಸಿದರು.