ಪಲಿಮಾರಿನಲ್ಲಿ ಹಠಯೋಗ ತರಬೇತಿ ಶಿಬಿರ ಆರಂಭ

ಪಡುಬಿದ್ರಿ: ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡಲ್ಲಿ ಆರೋಗ್ಯ ಸುಸ್ಥಿತಿಯಲ್ಲಿಡಲು ಸಾಧ್ಯ ಎಂದು ಪಲಿಮಾರು ದೇವಳದ ಪ್ರಧಾನ ಅರ್ಚಕ ಪಿ.ಆರ್. ಶ್ರೀನಿವಾಸ ಉಡುಪ ಹೇಳಿದರು.

ಇಲ್ಲಿಗೆ ಸಮೀಪದ ಪಲಿಮಾರು ಹೊೈಗೆ ಫ್ರೆಂಡ್ಸ್ ನೇತೃತ್ವದಲ್ಲಿ ಪಡುಬಿದ್ರಿ ಹಠಯೋಗ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಪಲಿಮಾರು ಗ್ರಾಪಂ ಸಭಾಭವನದಲ್ಲಿ ಹಠಯೋಗ ತರಬೇತಿ ಶಿಬಿರ ಮತ್ತು ಚಿಕಿತ್ಸಾ ಶಿಬಿರವನ್ನು ಪಿಆರ್ ಶ್ರೀನಿವಾಸ ಉಡುಪ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯೋಗ ತರಬೇತುದಾರ ಡಾ.ಮನೋಜ್ ಕುಮಾರ್ ಶೆಟ್ಟಿ ಯೋಗದ ಮಹತ್ವ ಮತ್ತು ಯೋಗ ಬೆಳೆದು ಬಂದ ಬಗೆಯನ್ನು ವಿವರಿಸಿದರು.

ಹೊೈಗೆ ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಜೆ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ರು.ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ,ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ,ಯೋಗಪಟು ನಿತೇಶ್ ಕೆಂಜಾರು,ಹೊೈಗೆ ಫ್ರೆಂಡ್ಸ್ ಗೌರವಾಧ್ಯಕ್ಷ ಗೋಕುಲ್ ಪಲಿಮಾರು ಮುಖ್ಯ ಅತಿಥಿಗಳಾಗಿದ್ದರು.
ಬಳಿಕ ಮಂಗಳೂರು ಯೋಗ ತಜ್ಞ ನಿತೇಶ್ ಕೆಂಜಾರುರವರಿಂದ ಯೋಗ ಪ್ರದರ್ಶನ ನಡೆಯಿತು.

ರಾಘವೇಂದ್ರ ಜೆ.ಸುವರ್ಣ ಸ್ವಾಗತಿಸಿದರು.ಸತೀಶ್ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು.ಅರುಣ್ ಎಸ್ ಪೂಜಾರಿ ವಂದಿಸಿದರು.
ನ. 21ರ ತನಕ ಪ್ರತಿದಿನ ಮುಂಜಾನೆ 5.45ರಿಂದ 6.45ರತನಕ ಯೋಗ ತರಬೇತಿ ನಡೆಯಲಿದೆ.