ಪರೋಪಕಾರದ ಜೀವನ ಶ್ಲಾಘನೀಯ:ಶ್ರೀ ಚಂದ್ರಶೇಖರ ಸ್ವಾಮೀಜಿ

ಮೂಲ್ಕಿ: ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ಪರೋಪಕಾರದಿಂದ ಜೀವನ ಸಾಗಿಸಿಕೊಂಡು ಬಡವರ ಸೇವೆ ಮಾಡುತ್ತಿರುವ ಅಬ್ದುಲ್ ರಜಾಕ್‍ರವರ ಕಾರ್ಯ ಶ್ಲಾಘನೀಯ ಎಂದು ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ಮೂಲ್ಕಿಯ ಸಾಮಾಜಿಕ ಕಾರ್ಯಕರ್ತ ಹಾಗೂ ರಾಜಕೀಯ ಧುರೀಣ ಅಬ್ದುಲ್ ರಜಾಕ್‍ರವರನ್ನು ಕಿಲ್ಪಾಡಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಆಶ್ರಮದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಸನ್ಮಾನಕ್ಕೆ ಉತ್ತರಿಸಿ ಅಬ್ದುಲ್ ರಜಾಕ್ ಮಾತನಾಡಿ ಸ್ವಾಮೀಜಿ ಮಾಡಿದ ಸನ್ಮಾನದಿಂದ ಪ್ರೇರಿತನಾಗಿದ್ದು ಮೂಲ್ಕಿ ಜನತೆಯ ಸಮಸ್ಯೆಗಳ ಬಗ್ಗೆ ಅದಷ್ಟು ಬಗೆಹರಿಸಲು ಪ್ರಯತ್ನಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭ ಸ್ವಾಮೀಜಿಯವರ ಮಾತೃಶ್ರೀ ಶಾರದಮ್ಮ,ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್,ಆಶ್ರಮದ ಸಂಚಾಲಕ ವಿಜಯ್ ಕುಮಾರ್,ಮಾಧ್ಯಮ ಸಂಚಾಲಕ ಪುನೀತ ಕೃಷ್ಣ ಉಪಸ್ಥಿತರಿದ್ದರು.
ವಿಜಯ್ ಕುಮಾರ್ ಸ್ವಾಗತಿಸಿದರು.ಪುನೀತ ಕೃಷ್ಣ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

 

ಕ್ಯಾ: ಮೂಲ್ಕಿಯ ಸಾಮಾಜಿಕ ಕಾರ್ಯಕರ್ತ ರಾಜಕೀಯ ಧುರೀಣ ಅಬ್ದುಲ್ ರಜಾಕ್‍ರವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಸನ್ಮಾನಿಸಿದರು.