ಪರಸ್ಪರ ಬಾಂಧವ್ಯ ಹೆಚ್ಚಿಸುವ ಕಾರ್ಯ ಅಭಿನಂದನೀಯ-ರೆ.ಎಡ್ವರ್ಡ್ ಕರ್ಕಡ

ಮೂಲ್ಕಿ” ಕೊಡುಗೆಗಳ ಹಬ್ಬವಾಗಿರುವ ಕ್ರಿಸ್ಮಸ್ ಹಬ್ಬದೊಂದಿಗೆ ಏಸುಕ್ರಿಸ್ತರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಪರಸ್ಪರ ಬಾಂಧವ್ಯ ಹೆಚ್ಚಿಸುವ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚಿನ ಸಭಾ ಪಾಲಕ ರೆ.ಎಡ್ವರ್ಡ್ ಕರ್ಕಡ ಹೇಳಿದರು.

ಮೂಲ್ಕಿ ಕೊರೆಸಾಂ ಅಮ್ಮನವರ ಚರ್ಚಿನ ಧಾರ್ಮಿಕ ಪರಿಷದ್ ಆಶ್ರಯದಲ್ಲಿ ಮಂಗಳವಾರ ಸಂಜೆ ಕಾರ್ನಾಡು ಸೈಂಟ್ ಜೋಸೆಫ್ ಹಾಲ್ ನಲ್ಲಿ ನಡೆದ ಬಂಧುತ್ವ ಕ್ರಿಸ್ಮಸ್ ಹಬ್ಬದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಹರ್ಷರಾಜ ಶೆಟ್ಟಿ ಜಿ.ಎಮ್. ಮುಖ್ಯ ಅತಿಥಿಯಾಗಿ ಮಾತನಾಡಿ, ಮೂಲ್ಕಿಯು ಹಿಂದಿನಿಂದಲೂ ಧರ್ಮ ಸಾಮರಸ್ಯತೆಗೆ ಹೆಸರುವಾಸಿಯಾಗಿದೆ. ಅದು ಮುಂದೆಯೂ ಉಳಿಯುವಂತಾಗಲು ಎಲ್ಲಾ ವರ್ಗದವರನ್ನು ಸೇರಿಸಿ ನಡೆಸಿದ ಬಂಧುತ್ವ ಕ್ರಿಸ್ಮಸ್ ಕಾರ್ಯಕ್ರಮ ಅಭಿನಂದನೀಯ ಎಂದರು.

ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚು ಧರ್ಮಗುರುಗಳಾದ ರೆ.ಪಾ. ಸಿಲ್ವೆಸ್ಟರ್ ಡಿಕೋಸ್ಟಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಹಸನಬ್ಬ(ಪುತ್ತುಬಾವ), ಮೂಲ್ಕಿ ಡಿವೈನ್ ಕಾಲ್ ಸೆಂಟರ್ ನಿರ್ದೇಶಕ ಫಾ.ಸಿಪ್ರಿಯನ್ ಲೂವಿಸ್, ಪಾಲನಾ ಪರಿಷದ್ ಉಪಾಧ್ಯಕ್ಷೆ ಜೀನ್ ಮೊಲಿನ್ ಡಿಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೇರೊ ಉಪಸ್ಥಿತರಿದ್ದರು.

ಬೆಥನಿ ಶಾಲೆಯ ವಿದ್ಯಾರ್ಥಿನಿಯರು ಶಿಕ್ಷಕಿ ಟೀನಾ ನಿರ್ದೇಶನದಲ್ಲಿ ಕ್ರಿಸ್ತ ಜನ್ಮ ವೃತ್ತಾಂತ ಬಿಂಬಿಸುವ ನ್ಥತ್ಯ ರೂಪಕ ನಡೆಸಿದರು. ಜೆಸಿಂತಾ ಡಿಸೋಜ ಸಂತಾಕ್ಲಾಸ್ ಆಗಿ ರಂಜಿಸಿದರು. ಜೀಮ್ ಮೋಲಿನ್ ಡಿಸೋಜಾ ಸ್ವಾಗತಿಸಿದರು. ವಿಶ್ರಾಂತ ಶಿಕ್ಷಕಿ ಹಿಲ್ಡಾ ಪುರ್ಟಾಡೊ ನಿರೂಪಿಸಿದರು. ಪ್ರಕಾಶ್ ಮೊಂತೇರೊ ವಂದಿಸಿದರು.

ಫೋಟೋ: ಮೂಲ್ಕಿ ಕೊರೆಸಾಂ ಅಮ್ಮನವರ ಚರ್ಚಿನ ಧಾರ್ಮಿಕ ಪರಿಷದ್ ಆಶ್ರಯದಲ್ಲಿ ಮಂಗಳವಾರ ಸಂಜೆ ಕಾರ್ನಾಡು ಸೈಂಟ್ ಜೋಸೆಫ್ ಹಾಲ್‍ನಲ್ಲಿ ನಡೆದ ಬಂಧುತ್ವ ಕ್ರಿಸ್ಮಸ್ ಹಬ್ಬದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚಿನ ಸಭಾ ಪಾಲಕ ರೆ. ಎಡ್ವರ್ಡ್ ಕರ್ಕಡ ಮಾತನಾಡಿದರು.