ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು-ಹರಿಕೃಷ್ಣ ಪುನರೂರು

ಮೂಲ್ಕಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೆ ಮುಳುಗುವ ಯುವ ಪೀಳಿಗೆ ಓದುವ ಹವ್ಯಾಸದಿಂದ ವಿಮುಖವಾಗುತ್ತಿದೆ.ಇದರಿಂದ ಅಕ್ಷರ ಜ್ಞಾನ ಕಡಿಮೆಯಾಗುತ್ತದೆ.ಹಾಗಾಗಿ ಪತ್ರಿಕೆ ಹಾಗೂ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಸಾಪ ಪೂರ್ವ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿ ಸ್ವಾಗತ್ ಹೋಟೆಲ್‍ನ ಪುನರೂರು ಸಭಾಂಗಣದಲ್ಲಿ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜ ಗುರುತಿಸದವರನ್ನು ಕಂಡುಹಿಡಿದು ಗುರುತಿಸಿ ಸನ್ಮಾನಿಸುವ ಮೂಲಕ ಹೊಸ ಅಂಗಣ ಇತರರಿಗೆ ಮಾದರಿಯಾಗಿದೆ ಎಂದವರು ಹೇಳಿದರು.

ಸನ್ಮಾನ:ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರೋಜಾ ಬಾಲಕೃಷ್ಣ ರಾವ್‍ರವರನ್ನು ಹೊಸ ಅಂಗಣ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನಿರಂತರ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗೈದ ಅಪ್ರತಿಮ ಸಾಧನೆಗಾಗಿ ಗೌರವ ಡಾಕ್ಟರೇಟ್ ಪಡೆದ ಹೊಸ ಅಂಗಣದ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‍ರನ್ನು ಹೊಸ ಅಂಗಣ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿ ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಅಬಾಲ ವೃದ್ಧರಿಗೆ ಸದಾ ತುಡಿಯುವ ಮನಸ್ಸಿನ ಸರೋಜಮ್ಮನವರಿಗೆ ಗೌರವಿಸಿರುವುದು ಔಚಿತ್ಯಪೂರ್ಣವಾದುದು.ಮೂಲ್ಕಿ ಅಭಿವೃದ್ಧಿಗೆ ಹೊಸ ಅಂಗಣದ ಕೊಡುಗೆ ಅಪಾರ.ಗೌರವ ಡಾಕ್ಟರೇಟ್ ಪಡೆದ ಡಾ.ಹರಿಶ್ಚಂದ್ರ ಸಾಲ್ಯಾನ್‍ರವರನ್ನು ನಪಂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು.

ಮುಂಬೈ ತುಳುಕೂಟದ ಅಧ್ಯಕ್ಷ ಡಾ.ರವಿರಾಜ್,ಹೊಸ ಅಂಗಣದ ಉಪ ಸಂಪಾದಕ ಶೇಖರ್ ಚಿತ್ರಾಪು,ತೋಕೂರು ತಪೋವನ ಎಮ್‍ಆರ್ ಪೂಂಜಾ ಐಟಿಐ ಪ್ರಾಂಶುಪಾಲ ವೈ.ಎನ್.ಸಾಲ್ಯಾನ್,ಸುರೇಶ್ ಬಂಗೇರ ಬಪ್ಪನಾಡು,ವಿಜಯಕುಮಾರ್ ಕುಬೆವೂರು ಮುಖ್ಯ ಅತಿಥಿಗಳಾಗಿದ್ದರು.
ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವಿಸಿದರು.ರವಿಚಂದ್ರ ಕಾರ್ಯಕ್ರಮ ನಿರ್ವಹಿಸಿದರು.ಆನಂದ ದೇವಾಡಿಗ ಪ್ರಾರ್ಥಿಸಿದರು.ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.

 


 

ಮೂಲ್ಕಿಯ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‍ರವರು ತಮ್ಮ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗೈದ ಅಪ್ರತಿಮ ಸಾಧನೆಗಾಗಿ ಬೆಂಗಳೂರು ಇಂಡಿಯನ್ ಕೌನ್ಸಿಲ್ ಫಾರ್ ಪ್ರೊಫೆಶನಲ್ ಎಜ್ಯುಕೇಶನ್ ಮಿಷನ್ ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿದ್ದು,ಈ ಹಿನ್ನೆಲೆಯಲ್ಲಿ ಮೂಲ್ಕಿಯ ಹೊಸ ಅಂಗಣ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.ಧರ್ಮದರ್ಶಿ ಹರಿಕೃಷ್ಣ ಪುನರೂರು,ಸುನಿಲ್ ಆಳ್ವ,ಡಾ.ರವಿರಾಜ್,ಶೇಖರ್ ಚಿತ್ರಾಪು,ವೈ.ಎನ್.ಸಾಲ್ಯಾನ್,ವಿಜಯಕುಮಾರ್ ಕುಬೆವೂರು,ವಾಮನ ಕೋಟ್ಯಾನ್ ನಡಿಕುದ್ರು,ಸುರೇಶ್ ಬಂಗೇರ ಬಪ್ಪನಾಡು,ರವಿಚಂದ್ರ ಮತ್ತಿಯರು ಉಪಸ್ಥಿತರಿದ್ದರು.