ಪಡುಬಿದ್ರಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ದೀಪೆÇೀತ್ಸವ

ಪಡುಬಿದ್ರಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿನ ವರ್ಷಾವಧಿ ದೀಪೆÇೀತ್ಸವವು ನ. 18ರಂದು ಜರಗಿತು. ಶ್ರೀ ದೇವರ ವೈಭವದ ಪುರ ಮೆರವಣಿಗೆಯ ಬಳಿಕ ಸಂಜೆಯ ವೇಳೆಗೆ ದೇವಸ್ಥಾನಕ್ಕೆ ಹಿಂತಿರುಗಿದ ಶ್ರೀ ದೇವರ ಪ್ರೀತ್ಯರ್ಥ ಶ್ರೀ ದೇವಳದ ಸಭಾಂಗಣದಲ್ಲಿ ನಿರ್ಮಿಸಲಾದ ವನದಲ್ಲಿ ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ಸಚ್ಚಿದಾನಂದ ಶರ್ಮ ನೇತೃತ್ವದಲ್ಲಿ ಹವನವು ನಡೆಯಿತು.

ಶ್ರಿ ಲಕ್ಷ್ಮೀ ವೆಂಕಟರಮಣ ದೇವರಿಗೆ ವಿಶೇಷ ಪುಷ್ಪಾಲಂಕಾರಗಳು ನಡೆದವು. ಬಳಿಕ ಶ್ರೀ ದೇವರ ಮಹಾಪೂಜೆ, ವನಭೋೀಜನದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೀಪೆÇೀತ್ಸವದ ಶುಭಾವಸರದಲ್ಲಿ ವೀಣಾ ನಾಯಕ್ ಅವರು ವಿಶೇಷ ಮರಾಠಿ ಹಾಡುಗಳನ್ನು ಹಾಡಿ ಜನಮನ ರಂಜಿಸಿದರು. ಇವರಿಗೆ ಶ್ರೀವತ್ಸ ಶರ್ಮ ಪಡುಬಿದ್ರಿ ತಬಲಾ ಸಾಥ್ ನೀಡಿದರು. ತದನಂತರ ನೆರೆದಿದ್ದ ಗೌಡಸಾರಸ್ವತ ಸಮಾಜ ಬಾಂಧವ ಬ್ರಾಹ್ಮಣ ಸುವಾಸಿನೀ ಆರಾಧನೆಗಳು ನಡೆದವು.

ಬಳಿಕ ಪುಷ್ಪರಥೋತ್ಸವಾದಿಗಳು, ಪಡುಬಿದ್ರಿ ಪೇಟೆ ಸವಾರಿ, ಕಟ್ಟಪೂಜೆಗಳು ನಡೆದವು. ಶ್ರೀ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಶೆಣೈ, ಮೊಕ್ತೇಸರ ಮಂಡಳಿ, ಪಡುಬಿದ್ರಿ ಪೇಟೆಯ ಹತ್ತು ಸಮಸ್ತರು, ಸೇವಾ ಯುವಕ ಸಂಘ ಮತ್ತು ಮಹಿಳಾ ಸಮಿತಿಯ ಸದಸ್ಯರು ಈ ಮಹೋತ್ಸವದಲ್ಲಿ ಭಕ್ತಿಭಾವಗಳಿಂದ ಪಾಲ್ಗೊಂಡರು.