ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ಧ್ವಜಾರೋಹಣ

ಕೊರೊನಾ ಮಹಾಮಾರಿ ಭೀತಿಯಲ್ಲಿ ಉತ್ಸವ ಸರಳ ಆಚರಣೆಗೆ ನಿರ್ಧಾರ

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲೀಮಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಮಹೋತ್ಸವದ ಪೂರ್ವಭಾವಿಯಾಗಿ ಶನಿವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನಡೆಯಿತು.

ಶ್ರೀ ದೇವಳದ ಅನುವಂಶಿಕ ಮೊಕ್ತೇಸರರುಗಳಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪೇಟೆಮನೆ ಪಿ.ವಿಶ್ವನಾಥ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಲೋಕ ಕಲ್ಯಾಣಾರ್ಥವಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು.

ಸರಳ ಆಚರಣೆ: ಮಾರ್ಚ್ 21 ವರ್ಷಾವಧಿ ಉತ್ಸವ ನಡೆಯಲಿದ್ದು, ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ಕರ್ನಾಟಕ ಸರಕಾರದ ಆದೇಶದ ಪ್ರಕಾರ ಶ್ರೀ ದೇವಳದ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವ ಅಂಗವಾಗಿ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ಹಾಕಬಾರದು. ಉತ್ಸವ ಅಂಗವಾಗಿ ನಡೆಯಬೇಕಿದ್ದ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ದೇವಳದ ಮುಂಬಾಗ ಬೃಹತ್ ಬ್ಯಾನರ್ ಅಳವಡಿಸಲಾಗಿದೆ. ಇಲ್ಲಿನ ಉತ್ಸವ ಅಂಗವಾಗಿ ನಡೆಯುವ ಮಹಾ ಅನ್ನಸಂತರ್ಪಣೆಗೂ ಕೊರೊನಾ ಮಾಹಾಮಾರಿ ಬಿಸಿ ತಟ್ಟುವ ಸಂಭವ ಗೋಚರಿಸಿದ್ದು, ಸರಕಾರ ಆದೇಶಿಸಿದಲ್ಲಿ ಅನ್ನಸಂತರ್ಪಣೆಯೂ ರದ್ದಾಗಬಹುದು.