ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ಕಾಣಿಯೂರು ಶ್ರೀ ಭೇಟಿ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ಶುಕ್ರವಾರ ರಾತ್ರಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿದರು.

ಈ ಸಂದರ್ಭ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಶ್ರೀಗಳನ್ನು ಮುರುಡಿ ಕುಟುಂಬಿಕರಾದ ಭಾಸ್ಕರ ರಾವ್ ದಂಪತಿ ಪಾದಪೂಜೆ ನಡೆಸಿ ಸ್ವಾಗತಿಸಿದರು.ಬಳಿಕ ಶ್ರೀಗಳು ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಬ್ರಹ್ಮಸ್ಥಾನದ ಪಾತ್ರಿಗಳಾದ ಪಿ.ಜಿ.ನಾರಾಯಣ ರಾವ್ ಮತ್ತು ಪಿ.ಸುರೇಶ್ ರಾವ್,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್,ಗುರಿಕಾರರಾದ ಶ್ರೀನಿವಾಸ ರಾವ್,ವಿಠಲ ರಾವ್ ಮತ್ತು ಕೃಷ್ಣಾನಂದ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್,ಮುರುಡಿ ಕುಟುಂಬಿಕರಾದ ಜಗನ್ನಾಥ ರಾವ್,ಚೆನ್ನೈ ಉದ್ಯಮಿಗಳಾದ ಜಯಪ್ರಕಾಶ್ ರಾನ್,ಪದ್ಮನಾಭ ರಾವ್,ಶೇಖರ ರಾವ್,ರಾಮಮೂರ್ತಿ ರಾವ್,ಶ್ರೀನಿವಾಸ ರಾವ್,ಮುರುಡಿ ಕುಟುಂಬಿಕರು ಉಪಸ್ಥಿತರಿದ್ದರು.