ಪಡುಬಿದ್ರಿ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಕಟಾಹಾಪೂಪ ಸೇವೆ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಸನ್ನಿಧಾನದಲ್ಲಿ ಪಡುಬಿದ್ರಿ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಕಟಾಹಾಪೂಪ ಸೇವೆಯು ಸೋಮವಾರ ರಾತ್ರಿ ಜರಗಿತು. ಈ ಸಂದರ್ಭದಲ್ಲಿ ಶ್ರೀದೇವರ ರಾತ್ರಿ ಪೂಜೆ, ಪ್ರಾರ್ಥನೆಗಳ ಬಳಿಕ ಸೇವಾಕರ್ತರಿಗೆ ಪ್ರಸಾದವನ್ನು ಹಂಚಲಾಯಿತು. ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣರ ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ, ಶ್ರೀ ದೇವಸ್ಥಾನದ ಪವಿತ್ರಪಾಣಿ ಸಹೋದರರಾದ ಕೊರ್ನಾಯ ಶ್ರೀಪತಿ ರಾವ್, ಕೊರ್ನಾಯ ಪದ್ಮನಾಭ ರಾವ್, ಟ್ರಸ್ಟ್‍ನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಕೋಶಾಧಿಕಾರಿ ವೈ. ಸುರೇಶ್ ರಾವ್, ಟ್ರಸ್ಟ್‍ನ ಸದಸ್ಯರು, ಶ್ರೀ ಬ್ರಹ್ಮಸ್ಥಾನದ ಪಾತ್ರಿಗಳಾದ ಪಿ. ಜಿ. ನಾರಾಯಣ ರಾವ್, ಸುರೇಶ್ ರಾವ್, ಶ್ರೀ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್, ಗುರುರಾಜ ಭಟ್, ಶ್ರೀ ಬ್ರಹ್ಮಸ್ಥಾನದ ಅರ್ಚಕರಾದ ಗುರುರಾಜ ಆಚಾರ್ಯ, ರಘುಪತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.