ಪಡುಬಿದ್ರಿ: ಶಾಸಕ ಲಾಲಾಜಿ ಮೆಂಡನ್‍ರಿಂದ 30ಲಕ್ಷ ರೂ. ಕಾಮಗಾರಿ ಉದ್ಘಾಟನೆ, ಒಂದು ಕೋಟಿ ರೂ.ಕಾಮಗಾರಿಗೆ ಗುದ್ದಲಿ ಪೂಜೆ

ಪಡುಬಿದ್ರಿ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿವಿಧ ಅನುದಾನಗಳನ್ನು ಬಳಸಿ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ವಿವಿಧ ಅನುದಾನಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಗುರುವಾರ ಪಂಚಾಯತ್‍ರಾಜ್ ಇಲಾಖಾ ಅನುದಾನ ರೂ.30 ಲಕ್ಷದಿಂದ ಕಾಂಕ್ರೀಟೀಕರಣಗೊಳಿಸಿದ ಪಡುಬಿದ್ರಿಯ ಬೇಂಗ್ರೆ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಸದಸ್ಯರಾದ ಸಾಧನಾ ಎಚ್.ಕೋಟ್ಯಾನ್, ಜಯ ಸಾಲ್ಯಾನ್, ಹರಿಣಿ ಅರವಿಂದ್, ಲಕ್ಷ್ಮಣ ಅಮೀನ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಉದ್ಯಮಿ ಮಿಥುನ್ ಆರ್.ಹೆಗ್ಡೆ, ಬಿಜೆಪಿ ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದ ವಿಶುಕುಮಾರ್ ಶೆಟ್ಟಿಬಾಲ್, ಗುತ್ತಿಗೆದಾರರಾದ ಶರೀಫ್ ಮತ್ತು ಮನ್ಸೂರ್, ರಮೀಝ್ ಹುಸೈನ್, ಬಾಲಕೃಷ್ಣ ದೇವಾಡಿಗ, ಕೌಸರ್ ಉಪಸ್ಥಿತರಿದ್ದರು.

ನದಿ ದಂಡೆ ಅಭಿವೃದ್ಧಿಗೆ ಗುದ್ದಲಿ ಪೂಜೆ: ಸಣ್ಣ ನೀರಾವರಿ ಇಲಾಖೆಯ ಅನುದಾನ ರೂ.50 ಲಕ್ಷದಿಂದ ನಡ್ಸಾಲು ಸೇತುವೆ ಬಳಿ ಮತ್ತು ಪಡುಬಿದ್ರಿ ಗ್ರಾಮದ ಪಾದೆಬೆಟ್ಟು ಮುಗಿಲಕೋಡಿ ಬಳಿ ನದಿ ದಂಡೆ ಕಾಮಗಾರಿಗೆ ಈ ಸಂದರ್ಭ ಶಾಸಕ ಮೆಂಡನ್ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯರಾದ ಸೇವಂತಿ ಸದಾಶಿವ, ಹರೀಶ್ ಶೆಟ್ಟಿ, ಶಶಿಕಲಾ, ಶ್ರೀನಿವಾಸ ಶರ್ಮ, ಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತೋಡು ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ: ಇದೇ ಸಂದರ್ಭ ಪಡುಬಿದ್ರಿ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಎದುರಿನ ಹರಿಯುವ ನೀರಿನ ತೋಡು ಅಭಿವೃದ್ಧಿ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ ರೂ. 50 ಲಕ್ಷ ಬಿಡುಗಡೆಯಾಗಿದ್ದು, ಶಾಸಕ ಮೆಂಡನ್ ಗುದ್ದಲಿ ಪೂಜೆ ನೆರವೇರಿಸಿದರು. ರಮಾಕಾಂತ ದೇವಾಡಿಗ, ದೇವದಾಸ ಶರ್ಮ, ಅಶೋಕ್ ಪೂಜಾರಿ, ಶ್ರೀನಾಥ್ ಶರ್ಮ, ಹರೀಶ್ ಶೆಟ್ಟಿ, ಯೋಗೀಶ್ ಪೂಜಾರಿ, ಇಂಜಿನಿಯರ್ ಎಸ್.ಟಿ. ಗೌಡ, ಗುತ್ತಿಗೆದಾರ ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತಿರಿದ್ದರು.