ಪಡುಬಿದ್ರಿ: ರಾಷ್ಟ್ರೀಯ ಏಕತಾ ನಡಿಗೆ

ಪಡುಬಿದ್ರಿ: ಸರ್ದಾರ್ ವಲ್ಲಭ ಭಾಯಿ ಪಟೇಲ್ ಈ ದೇಶ ಸ್ವತಂತ್ರವಾದಾಗ ಹರಿದು ಹಂಚಾಗಿದ್ದ ಸುಮಾರು 500ಕ್ಕೂ ಮಿಕ್ಕಿದ್ದ ಸ್ವತಂತ್ರ ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ದೇಶದ ನಿರ್ಮಾಣಕ್ಕಾಗಿ ಶ್ರಮಿಸಿದವರಾಗಿದ್ದರು. ಇದರ ಹಿಂದೆ ಅವರ ಶ್ರಮ ಅದ್ಭುತವಾಗಿತ್ತು ಎಂದು ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಹೇಳಿದರು.

ಅವರು ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ಬುಧವಾರ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು, ಪೆÇಲೀಸ್ ಇಲಾಖೆ ಹಾಗೂ ಮತ್ತಿತರರ ಸಂಘಟನೆಗಳ ಸಹಕಾರದೊಂದಿಗೆ ಬೋರ್ಡ್ ಶಾಲೆಯಿಂಃದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದವರೆಗೆ ಆಯೋಜಿಸಲಾಗಿದ್ದ ಏಕತಾ ನಡಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಪಡುಬಿದ್ರಿಯ ಸರಕಾರಿ ಪ. ಪೂ. ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸರಿತಾ ವೇಗಸ್, ಉದ್ಯಮಿ ಶಬ್ಬೀರ್ ಹುಸೈನ್, ಉದ್ಯಮಿ ದಯಾನಂದ ಹೆಜಮಾಡಿ, ಉದ್ಯಮಿ ಉದಯ ಕುಮಾರ್ ಶೆಟ್ಟಿ ಇನ್ನ, ಮಾಜಿ ತಾ. ಪಂ. ಸದಸ್ಯ ಸಚಿನ್ ನಾಯಕ್, ಪಡುಬಿದ್ರಿ ಗ್ರಾ. ಪಂ. ಸದಸ್ಯರು, ಕಾರು ಮಾಲಕ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕೌಸರ್, ರಿಕ್ಷಾ ಚಾಲಕ ಮಾಲಕರ ಸಂಘದ ಪ್ರತಿನಿಧಿಗಳು, ಶೇಖರ್ ಹೆಜಮಾಡಿ, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸತೀಶ್ ದೇವಾಡಿಗ, ಜೆಡಿಎಸ್ ಮುಖಂಡ ಅಶ್ರಫ್, ಲೀಲಾಧರ ಸಾಲ್ಯಾನ್ ಮತ್ತು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಇಂದಿನ ಏಕತಾ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಸರಕಾರಿ ಪ್ರೌಢಶಾಲೆಯಿಂದ ಪಡುಬಿದ್ರಿಯ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪಡುಬಿದ್ರಿ ಶ್ರೀ ದೇಗುಲದವರೆಗೆ ಏಕತಾ ನಡಿಗೆಯನ್ನು ನಡೆಸಲಾಯಿತು.
ಫೋಟೋ:31ಎಚ್‍ಕೆ1