ಪಡುಬಿದ್ರಿ: ಯಕ್ಷ ದಿಗ್ಗಜರಿಗೆ, ಸಮಾಜ ಸೇವಾಸಕ್ತರಿಗೆ ಪ್ರಶಸ್ತಿ ಪ್ರದಾನ

ಪಡುಬಿದ್ರಿ: ಪಡುಬಿದ್ರಿ ಬೇಂಗ್ರೆ ತರಂಗಿಣಿ ಮಿತ್ರ ಮಂಡಳಿ ಆಯೋಜಿಸಿದ 12ನೇ ವರ್ಷದ ತರಂಗಿಣಿ ಯಕ್ಷೋತ್ಸವವು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಸಭಾಂಗಣದಲ್ಲಿ ನಡೆಯಿತು.

ಪ್ರಶಸ್ತಿ ಪ್ರದಾನ: ಯಕ್ಷ ದಿಗ್ಗಜರನ್ನು ಹಾಗೂ ಸಮಾಜ ಸೇವಾಸಕ್ತರನ್ನು ಈ ಸಂದರ್ಭದಲ್ಲಿ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ಮದ್ದಳೆ ವಾದಕ ಪದ್ಯಾಣ ಶಂಕರನಾರಾಯಣ ಭಟ್, ಭಾಗವತ ಕುರಿಯ ಗಣಪತಿ ಶಾಸ್ತ್ರಿ, ವೇಷಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರನ್ನು ಯಕ್ಷ ತರಂಗಿಣಿ 2018 ಪ್ರಶಸ್ತಿಯೊಂದಿಗೆ ಮತ್ತು ಗೋ ಸೇವೆಗೆ ಸಹಕರಿಸಿದ ಯುವ ಉದ್ಯಮಿ ಪ್ರಶಾಂತ್ ಶೆಣೈ ಹಾಗೂ ನೀಲಾವರ ಗೋ ಶಾಲೆಯ ಗೋವುಗಳಿಗೆ ಮೇವು ಸಾಗಿಸಲು ಸೇವಾರೂಪದಲ್ಲೇ ನೆರವಾದ ಟೆಂಪೆÇೀ ಚಾಲಕ ಮಹಮ್ಮದ್‍ರನ್ನು ತರಂಗಿಣಿ ಸಮಾಜ ಸೇವಾ ಪ್ರಶಸ್ತಿಯೊಂದಿಗೆ ಸಮ್ಮಾನಿಸಲಾಯಿತು.

ಈ ಸಂದರ್ಭ ಪಡುಬಿದ್ರಿ ಕೃಷ್ಣಾಪುರ ಮಠದ ವೇದ ಮೂರ್ತಿ ಶ್ರೀನಿವಾಸ ಉಪಾಧ್ಯಾಯ, ವಿದ್ವಾನ್ ಗೋಪಾಲ ಜೋಯಿಸ, ವೇದ ಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ, ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಿ. ಜಿ. ನಾರಾಯಣ ರಾವ್, ಪಿ. ರಾಮಚಂದ್ರ ರಾವ್, ತರಂಗಿಣಿ ಮಿತ್ರ ಮಂಡಳಿಯ ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಉಪಾಧ್ಯಕ್ಷ ರಾಜೇಶ್ ಉಪಾಧ್ಯಾಯ ಉಪಸ್ಥಿತರಿದ್ದರು.

ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷ ರಮಾಕಾಂತ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.ಚಂದ್ರಶೇಖರ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಶೈಲೇಂದ್ರ ಉಪಾಧ್ಯಾಯ ವಂದಿಸಿದರು. ಬಳಿಕ ಸುದರ್ಶನೋಪಾಖ್ಯಾನ ಯಕ್ಷಗಾನ ಪ್ರದರ್ಶನ ಜರಗಿತು.