ಪಡುಬಿದ್ರಿ ಭಜನಾ ಸ್ಪರ್ಧೆಯಲ್ಲಿ ಕೋಡಿ ಬೇಂಗ್ರೆ ತಂಡಕ್ಕೆ ಪ್ರಶಸ್ತಿ

ಪಡುಬಿದ್ರಿ: ಇಲ್ಲಿನ ರೋಟರಿ ಕ್ಲಬ್, ಇನ್ನರ್‍ವೀಲ್ ಕ್ಲಬ್‍ಗಳ ಸಂಯುಕ್ತ ಆಶ್ರಯಲ್ಲಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ಉಡುಪಿ ಕೋಡಿ ಬೇಂಗ್ರೆಯ ಶ್ರೀ ವಿಠಲ ರುಕುಮಾಯಿ ಭಜನಾ ಮಂಡಳಿಯು ಪ್ರಶಸ್ತಿ ಸಹಿತ ನಗದು ರೂ.12,000 ಪಡೆಯಿತು.

ಹಳೆಯಂಗಡಿಯ ದಾಸ ಪ್ರಿಯ ತಂಡವು ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ, 9000 ಮತ್ತು ಮಂಗಳೂರು ಮೂಡುಶೆಡ್ಡೆಯ ಶ್ರೀ ದೇವಿ ಭಜನಾ ಮಂಡಳಿಯು ತೃತೀಯ ಪ್ರಶಸ್ತಿ ಸಹಿತ ನಗದು ರೂ 7000 ಪಡೆಯಿತು.

ಉತ್ತಮ ಗಾಯಕ-ನಿತಿನ್ ಮೂಲ್ಕಿ (ದಾಸ ಪ್ರಿಯ ಭಜನಾ ಮಂಡಳಿ ಹಳೆಯಂಗಡಿ), ಉತ್ತಮ ಗಾಯಕಿ-ಆರತಿ ಬಾಯಿ (ಶ್ರೀ ವೆಂಕಟರಮಣ ಭಜನಾ ಮಂಡಳಿ ಕಾರ್ಕಳ), ಉತ್ತಮ ತಬಲಾ ವಾದಕ-ಪ್ರದೀಪ್ ಅಚಾರ್ಯ(ದಾಸ ಪ್ರಿಯ ಭಜನಾ ಮಂಡಳಿ ಹಳೆಯಂಗಡಿ), ಉತ್ತಮ ಹಾರ್ಮೋನಿಯಂ ವಾದಕ-ಧನರಾಜ್(ಶ್ರೀ ವಿಠಲ ರುಕುಮಾಯಿ ಭಜನಾ ಮಂಡಳಿ ಕೋಡಿ ಬೇಂಗ್ರೆ ಉಡುಪಿ) ವೈಯಕ್ತಿಕ ಪ್ರಶಸ್ತಿ ಪಡೆದರು.
ಪ್ರಶಸ್ತಿ ವಿತರಣೆ: ದೇವಳದ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ರಿಯಾಝ್ ಮುದರಂಗಡಿ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಸಂಯೋಜಕ ನವೀನ್‍ಚಂದ್ರ ಜೆ.ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್, ರೋಟರಿ ಅಸಿಸ್ಟಂಟ್ ಗವರ್ನರ್ ಗಣೇಶ್ ಆಚಾರ್ಯ, ವಲಯ ಸೇನಾನಿ ರಮೀಝ್ ಹುಸೈನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್., ಕಾರ್ಯಕ್ರಮ ನಿರ್ದೇಶಕರಾದ ಹೇಮಚಂದ್ರ, ಸುಧಾಕರ ಕೆ, ಉದ್ಯಮಿ ದಯಾಕರ ಶೆಟ್ಟಿ, ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸುನಂದಾ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಕಸ್ತೂರಿ ಪ್ರವೀಣ್ ವಂದಿಸಿದರು.

ತೀರ್ಫುಗಾರಾಗಿ ರತ್ನಾವತಿ ಬೈಕಾಡಿ, ವೆಂಕಟೇಶ್ ರಾವ್ ಮಂಗಳೂರು ಭಾಗವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ದೇಶಕ ಹೇಮಚಂದ್ರ, ಸುಧಾಕರ ಕೆ, ಅವರನ್ನು ಸನ್ಮಾನಿಸಲಾಯಿತು.
ಫೋಟೋ:10ಎವ್‍ಕೆ1

ಕ್ಯಾ: ಪ್ರಥಮ ಪ್ರಶಸ್ತಿ ವಿಜೇತ ಕೋಡಿ ಬೇಂಗ್ರೆ ಶ್ರೀ ವಿಠಲ ರುಕುಮಾಯಿ ಭಜನಾ ಮಂಡಳಿಯು ಅತಿಥಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.