ಪಡುಬಿದ್ರಿ ಬೆಂಕಿ ಅನಾಹುತ

ಪಡುಬಿದ್ರಿ: ಇಲ್ಲಿನ ಠಾಣಾ ವ್ಯಾಪ್ತಿಯ ಎರ್ಮಾಳು ಕಲ್ಸಂಕ ಬಳಿ ಮಂಗಳವಾರ ಮಧ್ಯಾಹ್ನ ಮತ್ತೆ ಬೆಂಕಿ ಅನಾಹುತ ಸಂಭವಿಸಿ ಹಲವು ಗದ್ದೆಗಳ ಹುಲ್ಲುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಮಧ್ಯಾಹ್ನ ಬೆಂಕಿ ಕೆನ್ನಾಲಗೆ ರಾಹೆ 66ರವರೆಗೂ ಬಂದಿದ್ದು ದಟ್ಟ ಹೊಗೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಬಳಿಕ ಉಡುಪಿ ಮತ್ತು ಯುಪಿಸಿಎಲ್ ಅಗ್ನಿ ಶಾಮಕ ದಳದ ಎರಡು ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.ಪದೇ ಪದೇ ಇಲ್ಲಿ ಅಗ್ನಿ ಅನಾಹುತ ಸಂಭವಿಸುವ ಬಗ್ಗೆ ಸಾರ್ವಜನಿಕರು ಸಂದೇಹ ವ್ಯಕ್ತಪಡಿಸಿದ್ದಾರೆ.