ಪಡುಬಿದ್ರಿ: ನವಯುಗ್ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಗ್ರಾಪಂ ಸದಸ್ಯರಿಂದ ಕಛೇರಿಗೆ ಮುತ್ತಿಗೆ

ಪಡುಬಿದ್ರಿ: ಪಡುಬಿದ್ರಿಯಲ್ಲಿ ಕಳೆದ 5 ವರ್ಷಗಳಿಂದ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಪಡುಇದ್ರಿ ಗ್ರಾಪಂ ಸದಸ್ಯರು ಸೋಮವಾರ ನವಯುಗ್ ಕಛೇರಿಗೆ ಮುತ್ತಿಗೆ ಹಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಮಾಸಿಕ ಸಭೆಯನ್ನು ಮೊಟಕುಗೊಳಿಸಿ ಪಡುಬಿದ್ರಿ ಕೆಳಗಿನ ಪೇಟೆಯಲ್ಲಿರುವ ನವಯುಗ್ ಕಛೇರಿಗೆ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮತ್ತು ಉಪಾಧ್ಯಕ್ಷ ವೈ.ಸುಕುಮಾರ್ ನೇತೃತ್ವದಲ್ಲಿ ಮುತ್ತಿಗೆ ಹಾಗಿ ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಎರ್ಮಾಳು ತೆಂಕ ಕಲ್ಸಂಕ ಸೇತುವೆಗೆ ಅಡ್ಡಹಾಕಿ ನಿರ್ಮಿಸಿ ತಾತ್ಕಾಲಿಕ ರಸ್ತೆಯನ್ನು ತೆರವುಗೊಳಿಸಬೇಕು.ಕಳೆದ ಮಳೆಗಾಲದ ಆರಂಭದಲ್ಲಿ ಇಲ್ಲಿ ಶಾಲಾ ಬಾಲಕಿಯೊಬ್ಬಳು ನೆರೆ ನೀರಿಗೆ ಬಲಿಯಗಿದ್ದಳು.ಇದಕ್ಕೆ ನವಯುಗ್ ಕಂಪನಿಯ ರಸ್ತೆಯೇ ಕಾರಣವಾಗಿತ್ತು. ನಡ್ಸಾಲು ಗ್ರಾಮದ ಕೆಳಗಿನಪೇಟೆಯ ಹರಿಯುವ ನೀರಿನ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಸರ್ವಿಸ್ ರಸ್ತೆ ಅಪೂರ್ಣವಾಗಿದ್ದು ತಕ್ಷಣ ಪೂರ್ಣಗೊಳಿಸಬೇಕು. ಸಾರ್ವಜನಿಕ ಬಸ್ಸುನಿಲ್ದಾಣಗಳನ್ನು ತಕ್ಷಣ ನಿರ್ಮಿಸಬೇಕು. ಹೆದ್ದಾರಿಯ ಎರಡೂ ಬದಿಯ ಅಪೂರ್ನ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಲಿಖಿತ ಮನವಿ ಸಲ್ಲಿಸಿದರು.

ಕಾರ್ಕಳ ರಸ್ತೆಯಿಂದ ಕೋರ್ಟ್‍ಯಾರ್ಡ್‍ವರೆಗಿನ ಸರ್ವಿಸ್ ರಸ್ತೆ ಅಪೂರ್ನವಾಗಿರುವ ಹಿನ್ನೆಲೆಯಲ್ಲಿ ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ಮಳೆಗೇ ನೀರು ನಿಂತು ನಡೆದಾಡಲೂ ಅಸಾಧ್ಯವಾಗಿದೆ. ಚರಂಡಿಗಾಗಿ ಎಲ್ಲೆಡೆ ಹೊಂಡ ಮಾಡಿಡಲಾಗಿದ್ದು ತಕನ ಅವುಗಳನ್ನು ಮುಚ್ಚಬೇಕು. ಎಲ್ಲೆಡೆ ಮಳೆ ನೀರು ಸರಾಗ ಹರಿಯಲು ಕ್ರಮ Pಕೈಗೊಳ್ಳಬೇಕು ಎಂದು ಈ ಸಂದರ್ಭ ಆಗ್ರಹಿಸಲಾಯಿತು.
ಈ ಸಂದರ್ಭ ನವಯುಗ್ ಸೈಟ್ ಇಂಜಿನಿಯರ್ ದುರ್ಗಾ ಉಪಸ್ಥಿತರಿದ್ದು ಮುಂದಿನ 3 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.ಅವರನ್ನು ಸಮಸ್ಯೆಗಳಿರುವ ಎಲ್ಲೆಡೆ ಕರೆದುಕೊಂಡು ಹೋಗಿ ಸಮಸ್ಯೆಯನ್ನು ತಿಳಿಯಪಡಿಸಲಾಯಿತು.

ಮೇ 8 ರಂದು ಗ್ರಾಪಂ ನಿರ್ಣಯದಂತೆ ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠರವರು ಜಿಲ್ಲಾಧಿಕಾರಿ, ನವಯುಗ್ ಮತ್ತು ಹೆದ್ದಾರಿ ಇಲಾಖೆಗೆ ಪತ್ರ ಬರೆದು ನೈಜ ಸಮಸ್ಯೆಗಳನ್ನು ತಿಳಿಯಪಡಿಸಿದ್ದರು. ಆದರೆ ನವಯುಗ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಚುನಾವಣೆ ನಿಮಿತ್ತ 3 ತಿಂಗಳ ಬಳಿಕ ನಡೆದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಗ್ರಾಮಸ್ಥರ ಅಳಲನ್ನು ಸದಸ್ಯರನೇಕರು ಎತ್ತಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸುವಂತೆ ಒತ್ತಾಯಿಸಿದ್ದರು.