ಪಡುಬಿದ್ರಿ ನಡಿಪಟ್ಣ ಬಲಿ ಕಡಲ್ಕೊರೆತ

ಪಡುಬಿದ್ರಿ; ಇಲ್ಲಿನ ನಡಿಪಟ್ಣ ಮಹೇಶ್ವರೀ ಫಂಡ್ ಚಪ್ಪರದ ಬಲಿ ಶನಿವಾರ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಸಮುದ್ರ ತಡೆಗೋಡೆ ಹಾಗು ಕೆಲವು ಮರಗಳು ಸಮುದ್ರ ಪಾಲಾಗಿದೆ.

ನಡೆಪಟ್ಣ ಹರೀಶ್ ಪುತ್ರನ್ ಮನೆ ಬಳಿ ಸಮುದ್ರ ಅಲೆಗಳು ಉಕ್ಕೇರಿ ಸಮುದ್ರ ತಡೆಗೋಡೆಗಳ ಅಡಿಭಾಗವನ್ನು ಸೆಳೆದಿದ್ದು, ತಡೆಗೋಡೆಗಳಿಗೆ ಹಾನಿಯಾಗಿದೆ. ಇದೇ ವೇಳೆ ಹಲವು ಮರಗಿಡಗಳು ಸಮುದ್ರ ಪಾಲಾಗಿದೆ.
ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ ಸ್ಥಳಕ್ಕೆ ಆಗಮಿಸಿ ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ತಡೆಗೋಡೆ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ.