ಪಡುಬಿದ್ರಿ ಜಮಾಅತ್ ಅಧ್ಯಕ್ಷರಾಗಿ ಹಾಜಿ ಪಿ.ಕೆ. ಮೊಹಿದಿನ್ ಲಚ್ಚಿಲ್

ಪಡುಬಿದ್ರಿ: ಮೊಹಿಯುದ್ದೀನ್ ಜುಮ್ಮಾ ಮಸೀದಿ ಪಡುಬಿದ್ರಿ ಇದರ ಜಮಾಅತ್‍ನ 2019-20ನೇ ಸಾಲಿನ ಅಧ್ಯಕ್ಷರಾಗಿ ಹಾಜಿ ಪಿ.ಕೆ. ಮೊಹಿದಿನ್ ಲಚ್ಚಿಲ್ ಆಯ್ಕೆಯಾಗಿದ್ದಾರೆ.

ಪಡುಬಿದ್ರಿಯ ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆದ ಪಡುಬಿದ್ರಿ ಜಮಾಅತ್ ಮಹಾಸಭೆಯಲ್ಲಿ ಆಯ್ಕೆ ನಡೆದಿದೆ.

ಉಪಾಧ್ಯಕ್ಷರಾಗಿ ಅಬ್ದುಲ್ ಶುಕೂರ್ ದಾವೂದ್ ಸಾಹೇಬ್, ಕಾರ್ಯದರ್ಶಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಶೇಖ್ ಇಸ್ಮಾಯಿಲ್, ಜತೆ ರ್ಕಾದರ್ಶಿ ಹಾಜಿ ಎಸ್.ಪಿ. ಉಮರ್ ಫಾರೂಕ್, ಕೋಶಾಧಿಕಾರಿ ಹಾಜಿ ಎ.ಎಚ್. ಮುಹಮ್ಮದ್, ಸದಸ್ಯರಾಗಿ ಮಯ್ಯದ್ದಿ ಮಜಲಕೋಡಿ, ಅಕ್ಬರ್ ಪಿ.ಎಮ್, ಬಾಷಾ ಬೇಂಗ್ರೆ, ಇಂತಿಯಾಝ್ ಶಾಬು ಸಾಹೇಬ್, ನಜೀರ್ ಸಿ.ಪಿ, ಹಂಝ ಅಬ್ಬಾಸ್ ಹಾಗೂ ಲೆಕ್ಕಪರಿಶೋಧಕರಾಗಿ ಹಾಜಿ ಹಮ್ಮಬ್ಬ ಮೊಯಿದಿನ್ ಆಯ್ಕೆಯಾಗಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಉರ್ದು ಶಾಲಾ ಸಂಚಾಲಕ ಶಬ್ಬೀರ್ ಹುಸೈನ್ ವಹಿಸಿದ್ದರು. ಮಸೀದಿಯ ಖತೀಬ್ ಹಾಜಿ ಎಸ್.ಎಂ. ಅಬ್ದುಲ್ ರಹಮಾನ್ ಮದನಿ ದುವಾ ನೆರವೇರಿಸಿದರು. ಮಾಜಿ ಅಧ್ಯಕ್ಷ ಹಾಜಿ ಪಿ.ಎ. ರಹಮಾನ್ ಉಪಸ್ಥಿತರಿದ್ದರು.