ಪಡುಬಿದ್ರಿ: ಕೆಎಫ್‍ಸಿ-2018 ಹೊನಲು ಬೆಳಕಿನ ಅಂತಾರಾಜ್ಯ ವಾಲಿಬಾಲ್ ಪಂದ್ಯಾಟ ಆರಂಭ

ಪಡುಬಿದ್ರಿ: ಇಲ್ಲಿನ ಕಂಚಿನಡ್ಕ ಫ್ರೆಂಡ್ಸ್ ಸರ್ಕಲ್ ಸ್ಪೋಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಕಂಚಿನಡ್ಕ ಕೆಎಎಫ್‍ಸಿ ಮೈದಾನದಲ್ಲಿ ನಡೆದ ಅಂತಾರಾಜ್ಯ ವಾಲಿಬಾಲ್ ಪಂದ್ಯಾಟ ಕೆಎಎಪ್‍ಸಿ ಟ್ರೋಫಿ-2018ನ್ನು ಶನಿವಾರ ರಾತ್ರಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮತ್ತು ಮುಂಬೈ ಉದ್ಯಮಿ ಹಾಗೂ ಭಂಡಾರಿ ಮಹಾಮಂಡಲ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಉದ್ಘಾಟಿಸಿದರು.

ಈ ಸಂದರ್ಭ ಹಿರಿಯ ವಾಲಿಬಾಲ್ ಆಟಗಾರರಾದ ಶಶಿಕಾಂತ್ ಪಡುಬಿದ್ರಿ,ಪ್ರಕಾಶ್ ಶೆಟ್ಟಿ ಹೆಜಮಾಡಿ,ಬಶೀರ್ ಕಂಚಿನಡ್ಕ,ಸಮಾಜ ಸೇವಕರಾದ ಸುಗುಣ ಕಂಚಿನಡ್ಕ,ಕರುಣಾಕರ ಪೂಜಾರಿ ಮತ್ತಿ ಇಮ್ತಿಯಾಝ್ ಕಂಚಿನಡ್ಕರವರನ್ನು ಸನ್ಮಾನಿಸಲಾಯಿತು.

ತುಳು ಚಿತ್ರ ನಟ ಅರ್ಜುನ್ ಕಾಪಿಕಾಡ್,ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ,ಮುಂಬೈ ಓಶಿಯನ್ ಹೋಟೆಲ್ ಮಾಲೀಕ ಜಿತೇಂದ್ರ ಜೆ.ಶೆಟ್ಟಿ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ವಿ.ಶೆಟ್ಟಿ,ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ,ಬಿಜೆಪಿ ಕಾಪು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಪಡುಬಿದ್ರಿ ಫ್ರೆಂಡ್ಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಅಮರ್ ಕಂಫಟ್ರ್ಸ್ ಮಾಲೀಕ ಮಿಥುನ್ ಆರ್.ಹೆಗ್ಡೆ,ಪಲ್ಲವಿ ಹೋಟೆಲ್ ಮಾಲೀಕ ಸಂತೋಷ್ ಶೆಟ್ಟಿ ,ತಾಪಂ ಸದಸ್ಯ ದಿನೇಶ್ ಕೋಟ್ಯಾನ್,ಯುವ ವಾಗ್ಮಿ ಸಹನಾ ಕುಂದರ್ ಸೂಡ,ಉದ್ಯಮಿ ಇನ್ನ ಉದಯ ಕುಮಾರ್ ಶೆಟ್ಟಿ,ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ,ಗ್ರಾಪಂ ಸದಸ್ಯರಾದ ನವೀನ್ ಎನ್.ಶೆಟ್ಟಿ,ಹಸನ್‍ಬಾವ,ಆಶಾ,ಉದ್ಯಮಿಗಳಾದ ರಮೀಝ್ ಹುಸೈನ್,ಶಶಿ ಮಲ್ಪೆ,ಫಯಾಝ್ ಎಸ್‍ಪಿ,ದಸಂಸ ಸಂಚಾಲಕ ಲೋಕೇಶ್ ಕಂಚಿನಡ್ಕ,ಬಂಟರ ಸಂಘದ ಕಾರ್ಯದರ್ಶಿ ಡಾ. ಮನೋಜ್ ಶೆಟ್ಟಿ,ಕೆಎಎಫ್‍ಸಿ ಅಧ್ಯಕ್ಷ ದಿನೇಶ್,ಮುಂಬೈ ಉದ್ಯಮಿ ಸುಭಾಸ್ ಶೆಟ್ಟಿ,ಶೀನ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯದರ್ಶಿ ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಗಣೇರ್ಶ ಪಡುಬಿದ್ರಿ ವರದಿ ವಾಚಿಸಿದರು.