ಪಡುಬಿದ್ರಿ ಆರೋಗ್ಯ ಕೇಂದ್ರಕ್ಕೆ ಅತ್ಯಾಧುನಿಕ ಶೀತಲೀಕೃತ ಶವಾಗಾರ-ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಜಿಲ್ಲೆಯ ಗಡಿಭಾಗವಾಗಿದ್ದು, ಅತೀ ಹೆಚ್ಚು ಅಪಘಾತ ವಲಯವಾಗಿ ಗುರುತಿಸಿಕೊಂಡಿರುವ ಪಡುಬಿದ್ರಿಗೆ ಅತ್ಯಾಧುನಿಕ ಶೀತಲೀಕೃತ ಶವಾಗಾರದ ಅವಶ್ಯಕತೆ ಇದೆ. ಈ ಬಗ್ಗೆ ಸರಕಾರದಿಂದ ಸಿಗುವ ಅನುದಾನಗಳ ಬಗ್ಗೆ ಕ್ರಮಕೈಗೊಂಡು ದಾನಿಗಳ ನೆರವಿನಿಂದ ಶೀತಲೀಕೃತ ಶವಾಗಾರ ಸ್ಥಾಪನೆಗೆ ಮುಂದಡಿಯಿಡಲಾಗುವುದು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಸಂಜೆ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾಗಳ ೨೨ಕ್ಕೂ ಅಧಿಕ ಆರೋಗ್ಯ ಕಾರ್ಯಕ್ರಮಗಳು ಆರೋಗ್ಯ ಕೇಂದ್ರದ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಅವುಗಳ ಡಾಟಾ ಎಂಟ್ರಿ ಸಿಬ್ಬಂದಿಗಳಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ. ಈ ಸಮಸ್ಯೆ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕಂಡುಬAದಿದ್ದು, ಓರ್ವ ಡಾಟಾ ಎಂಟ್ರಿ ಒಪರೇಟರ್ ಹುದ್ದೆ ನೇಮಕಗೊಳಿಸಿದಲ್ಲಿ ಸಿಬ್ಬಂದಿಗಳಿಗೆ ಹೆಚ್ಚು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಎಲ್ಲಾ ಶಾಸಕರ ಬೆಂಬಲದೊAದಿಗೆ ವಿಷಯ ಪ್ರಸ್ತಾವಿಸುವುದಾಗಿ ಮೆಂಡನ್ ಭರವಸೆ ನೀಡಿದರು.

ಶೀತಲೀಕೃತ ಶವಾಗಾರ ನಿರ್ಮಾಣಕ್ಕೆ ಪಡುಬಿದ್ರಿ ಸಹಕಾರಿ ಸೇವಾ ಸೊಸೈಟಿಯು ರೂ.೫ ಲಕ್ಷ ದೇಣಿಗೆ ನೀಡಲು ಒಪ್ಪಿಗೆ ನೀಡಿದೆ ಎಂದು ಮೆಂಡನ್ ತಿಳಿಸಿದರು.
ಪಡುಬಿದ್ರಿ ಕೇಂದ್ರಕ್ಕೆ ಅಂಬುಲೆನ್ಸ್ ಅಗತ್ಯತೆ ಬಗ್ಗೆ ದಾನಿಗಳ ನೆರವಿನ ಮೂಲಕ ಶೀಘ್ರ ಅಂಬುಲೆನ್ಸ್ ಒದಗಿಸುವುದಾಗಿ ಅವರು ಹೇಳಿದರು.

ಪಡುಬಿದ್ರಿ ಕೇಂದ್ರದಲ್ಲಿ ೩೦ ಸಿಬ್ಬಂದಿಗಳು ಇರಬೇಕಿದ್ದು, ಸದ್ಯ ೧೫ ಮಂದಿ ಮಾತ್ರ ಕರ್ತವ್ಯದಲ್ಲಿರುವ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲುರವರನ್ನು ಕಾಪುವಿಗೆ ಕರೆದು ತಂದು ಕ್ಷೇತ್ರದ ಎಲ್ಲಾ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದವರು ಉತ್ತರಿಸಿದರು.

ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ: ರಾಜ್ಯದ ಅತ್ಯುತ್ತಮ ಆಸ್ಪತ್ರೆಯಾಗಿ ಜಿಲ್ಲೆಯ ೮ ಆರೋಗ್ಯ ಕೇಂದ್ರಗಳು ಆಯ್ಕೆಯಾಗಿದ್ದು, ಈ ಪೈಕಿ ಪಡುಬಿದ್ರಿ ಕೇಂದ್ರವೂ ಸತತ ೩ನೇ ಬಾರಿಗೆ ಪ್ರಶಸ್ತಿಯೊಂದಿಗೆ ರೂ.೫೦ ಸಾವಿರ ಬಹುಮಾನ ಪಡೆದಿರುವ ಬಗ್ಗೆ ಡಾ.ಬಿ.ಬಿ.ರಾವ್ ಮಾಹಿತಿ ನೀಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ರಕ್ಷಾ ಸಮತಿಯ ಸಭೆಯನ್ನು ನಡೆಸುವ ಪಡುಬಿದ್ರಿ ಕೇಂದ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರಂತರ ಮೀಟಿಂಗ್‌ಗಳಿAದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಬಗ್ಗೆ ಜಿಪಂ ಸಾನಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಗಮನ ಸೆಳೆದು ಪರ್ಯಾಯ ವ್ಯವಸ್ಥೆಗೆ ಶಾಸಕರಲ್ಲಿ ಮನವಿ ಮಾಡಿದರು. ಆಸ್ಪತ್ರೆಯ ಮುಂಭಾಗದಲ್ಲಿ ರೂ.೨ಲಕ್ಷ ಜಿಪಂ ನಿಧಿಯಿಂದ ಕಾಂಕ್ರೀಟೀಕರಣಗೊಳಿಸಲು ಶಶಿಕಾಂತ್ ಪಡುಬಿದ್ರಿ ಒಪ್ಪಿಗೆ ನೀಡಿದರು. ಬಾಕಿ ಉಳಿದ ಕಂಪೌAಡ್ ನಿರ್ಮಾಣಕ್ಕೆ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ತಾಪಂ ನಿಧಿ ಒದಗಿಸುವ ಭರವಸೆ ನೀಡಿದರು.

ಶಶಿಕಾಂತ್ ಪಡುಬಿದ್ರಿ, ನೀತಾ ಗುರುರಾಜ್, ತಾಪಂ ಸದಸ್ಯರಾದ ರೇಣುಕಾ ಪುತ್ರನ್ ಹೆಜಮಾಡಿ, ದಿನೇಶ್ ಕೋಟ್ಯಾನ್ ಪಲಿಮಾರು ಮತ್ತು ಕೇಶವ ಮೊಯ್ಲಿ, ಗ್ರಾಪಂ ಅಧ್ಯಕ್ಷರುಗಳಾದ ವಿಶಾಲಾಕ್ಷಿ ಪುತ್ರನ್ ಹೆಜಮಾಡಿ, ಅರುಣಾ ಕುಮಾರಿ ತೆಂಕ ಗ್ರಾಮ, ಶರ್ಮಿಳಾ ಡಿ.ಸಾಲ್ಯಾನ್ ಉಚ್ಚಿಲ, ಗ್ರಾಪಂ ಸದಸ್ಯ ಮೈಯದ್ದಿ ಪಡುಬಿದ್ರಿ, ಸಮಿತಿ ಸದಸ್ಯರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉಪಸ್ಥಿತರಿದ್ದರು. ಡಾ.ಬಿ.ಬಿ.ರಾವ್ ಸ್ವಾಗತಿಸಿ ವಂದಿಸಿದರು.