ಪಡುಬಿದ್ರಿಯ ಭಗವತಿ ಗ್ರೂಫ್‍ನಿಂದ ಧನ ಸಹಾಯ

ಪಡುಬಿದ್ರಿಯ ಭಗವತಿ ಗ್ರೂಫ್‍ನಿಂದ ಬಂಟ್ವಾಳ ಸಿದ್ದಕಟ್ಟೆ ಸಂಗಬೆಟ್ಟು ಗ್ರಾಮದ ಸಂಜೀವ ಆಚಾರ್ಯ-ಸರಸ್ವತಿ ದಂಪತಿಯ ಪುತ್ರಿ ಪ್ರತಿಮಾ ಅವರ ಗರ್ಭಕೋಶದ ಶಸ್ತ್ರ ಚಿಕಿತ್ಸೆಯ ವೈದ್ಯಕೀಯ ವೆಚ್ಚಕ್ಕೆ ಇಪ್ಪತ್ತು ಸಾವಿರ ರೂಪಾಯಿ ಧನ ಸಹಾಯವನ್ನು ಫಲಾನುಭವಿ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಭಗವತಿ ಗ್ರೂಫ್‍ನ ಯುವರಾಜ್ ಕುಲಾಲ್, ಸಂದೇಶ್, ಸುಹಾಸ್ ಶೆಟ್ಟಿ ನಟವರ್ಯ, ಸಿದ್ದಕಟ್ಟೆಯ ದಿನೇಶ್, ಪ್ರಶಾಂತ್ ಶಿವಪ್ರಸಾದ್, ಪ್ರವೀಣ್, ಮೋಹನ್, ರಮೇಶ್ ಉಪಸ್ಥಿತರಿದ್ದರು.