ಪಡುಬಿದ್ರಿಯ ಬ್ರಹ್ಮಸ್ಥಾನ ರಸ್ತೆಯ ನೂತನ ಸಾರ್ವಜನಿಕ ಅಶ್ವತ್ಥಕಟ್ಟೆ

ಪಡುಬಿದ್ರಿಯ ಬ್ರಹ್ಮಸ್ಥಾನ ರಸ್ತೆಯ ನೂತನ ಸಾರ್ವಜನಿಕ ಅಶ್ವತ್ಥಕಟ್ಟೆಯ ಸಮರ್ಪಣಾ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.ಈ ಸಂದರ್ಭ ಅಶ್ವತ್ಥ ನಾರಾಯಣ ಪೂಜೆ,ಕಲಶಾಭಿಷೇಕ,ಭಜನಾ ಕಾರ್ಯಕ್ರಮ,ಸಾರ್ವಜನಿಕ ಅನ್ನಸಂತರ್ಪಣೆ,ಶನೀಶ್ವರ ಮಹಾತ್ಮೆ,ವಿಕ್ರಮಾದಿತ್ಯ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು.

 

ಈ ಸಂದರ್ಭ,ಶಾಸಕ ಲಾಲಾಜಿ ಆರ್.ಮೆಂಡನ್,ಅಶ್ವತ್ಥಕಟ್ಟೆ ಸಮಿತಿಯ ಸ್ಥಾಪಕಾಧ್ಯಕ್ಷ ಕೃಷ್ಣ ಪಿ.ಬಂಗೇರ,ಗೌರವಾಧ್ಯಕ್ಷ ವಿಶುಕುಮಾರ್ ಶೆಟ್ಟಿಬಾಲ್,ಅಧ್ಯಕ್ಷ ರಾಮಕೃಷ್ಣ ಕೋಟ್ಯಾನ್,ಉಪಾಧ್ಯಕ್ಷ ಸುರೇಶ್ ಪಡುಬಿದ್ರಿ,ಕಾರ್ಯದರ್ಶಿ ಚೇತನ್‍ಕುಮಾರ್,ಕೋಶಾಧಿಕಾರಿ ಚಿತ್ರಾಕ್ಷಿ ಕೆ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.