ಪಡುಬಿದ್ರಿಯಲ್ಲಿ ಎಳೆಯರಿಗಾಗಿ “ವರ್ಣ ವಿಹಾರ” ಚಿತ್ರಬಿಡಿಸುವ ಸ್ಪರ್ಧೆ

ಪಡುಬಿದ್ರಿ: ರೋಟರಿ ಕ್ಲಬ್ ಪಡುಬಿದ್ರಿ, ಸಾಯಿರಾಧ ಹೆರಿಟೇಜ್ ಮತ್ತು ಅಭೀಕ್ಷ ಗ್ರಾಫಿಕ್ಸ್ ಇದರ ಜಂಟಿ ಸಹಯೋಗದೊಣದಿಗೆ ಪಡುಬಿದ್ರಿಯ ಬೀಚ್‍ನಲ್ಲಿ ವರ್ಣ ವಿಹಾರ-2019 ಶಾಲಾ ವಿದ್ಯಾರ್ಥಿಗಳ ಚಿತ್ರಬಿಡಿಸುವ ಸ್ಪರ್ಧೆ ಶನಿವಾರ ನಡೆಯಿತು.

ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜು ಚಿತ್ರಕಲಾ ಶಿಕ್ಷಕ ರಮೇಶ್ ಬಂಟಕಲ್ ಸ್ಥಳದಲ್ಲೇ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ದಮಯಂತಿ ವಿ. ಅಮೀನ್, ಸಾಯಿರಾಧ ಗ್ರೂಪ್‍ನ ಪದ್ಮರಾಜ್, ಕಾಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಲೀಲಾಧರ ಸಾಲ್ಯಾನ್, ಪತ್ರಕರ್ತ ಹರೀಶ್ ಕುಮಾರ್, ಮೂಲ್ಕಿ ಚಿತ್ರಕಲಾ ಶಿಕ್ಷಕ ಶೇಖರ್ ಕೋಟ್ಯಾನ್, ಎರ್ಮಾಳು ಗ್ರಾಪಂ ಸದಸ್ಯ ವಿನಯ ಶೆಟ್ಟಿ, ಅಭಿಕ್ಷಾ ಗ್ರಾಫಿಕ್ಸ್‍ನ ಗುರುಪ್ರಸಾದ್ ಪಡುಬಿದ್ರಿ, ರೋಟರಿ ಕ್ಲಬ್ ಕಾರ್ಯದರ್ಶಿ ಸುಧಾಕರ ಕನ್ನಂಗಾರ್ ಉಪಸ್ಥಿತರಿದ್ದರು.

ಬಹುಮಾನ ವಿತರಣೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿಕಟ ಪೂರ್ವ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪೂರ್ವ ಸಹಾಯಕ ಗವರ್ನರ್ ಮಾಧವ ಸುವರ್ಣ, ಪೂರ್ವಾಧ್ಯಕ್ಷ ಪಿ.ಎಲ್. ರಾಮಕೃಷ್ಣ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಸೇವಂತಿ ಸದಾಶಿವ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರಿಯಾಝ್ ನಝೀರ್ ಸಾಹೇಬ್, ಕಾರ್ಯದರ್ಶಿ ಸುಧಾಕರ ಕೆ, ನಿಯಾಝ್ ಪಡುಬಿದ್ರಿ,ನಿರ್ದೇಶಕ ಲೋಹಿತಾಕ್ಷ ಸುವರ್ಣ ಉಪಸ್ಥಿತರಿದ್ದರು.
ಫಲಿತಾಂಶ: ಮೂರು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. 1ರಿಂದ 4ನೇ ತರಗತಿ ವಿಭಾಗದಲ್ಲಿ ಪ್ರಾಣಿಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಬೆಳ್ಮಣ್ ಶ್ರೀ ಲಕ್ಷ್ಮೀ ಜನಾರ್ಧನ ಶಾಲೆಯ ಅರುಷ್ (ಪ್ರಥಮ), ಎರ್ಮಾಳು ಕಿನಾರ ಇಂಗ್ಲೀಷ್ ಮೀಡಿಯಂ ಶಾಲೆಯ ಶ್ರೇಯಾ (ದ್ವಿತೀಯ), ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಕೋಡಿಯ ರಿತಿಕಾ (ತೃತೀಯ).
5ರಿಂದ 7ನೇ ತರಗತಿ ವಿಭಾಗದ ಪ್ರಕೃತಿ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಪಡುಬಿದ್ರಿಯ ಸಾಗರ್ ವಿದ್ಯಾಮಂದಿರ ಶಾಲೆಯ ನಿಹಾಲ್ ಕೆ.ಜಿ. ಸುವರ್ಣ (ಪ್ರಥಮ), ಸುಭಾಶ್ರೀ (ದ್ವಿತೀಯ), ಭೂಮಿಕ (ತೃತೀಯ) .
8ರಿಂದ 10ನೇ ತರಗತಿ ವಿಭಾಗದ ಕರಾವಳಿಯ ಕಡಲು ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಸಾಗರ್ ವಿದ್ಯಾಮಂದಿರದ ಲೀಶಾ (ಪ್ರಥಮ), ಮೂಲ್ಕಿಯ ನಾರಾಯನ ಗುರು ಶಾಲೆಯ ಜಿತೇಶ್ (ದ್ವಿತೀಯ), ಎರ್ಮಾಳು ತೆಂಕ ಸರಕಾರಿ ಪ್ರೌಢಶಾಲೆಯ ಕಾರ್ತಿಕ್ (ತೃತೀಯ).