ಪಡುಬಿದ್ರಿಗೆ ಶೀಘ್ರ ಅಗ್ನಿಶಾಮಕ ದಳ ವ್ಯವಸ್ಥೆ-ಶಾಸಕ ಲಾಲಾಜಿ ಆರ್.ಮೆಂಡನ್ -ಪಡುಬಿದ್ರಿ ಗ್ರಾಪಂ ನೂತನ ಕಛೇರಿ ಕಟ್ಟಡ ಉದ್ಘಾಟನೆ

ಪಡುಬಿದ್ರಿ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಎರಡನೇ ಅತೀ ದೊಡ್ಡ ಗ್ರಾಪಂ ಪಡುಬಿದ್ರಿಗೆ ಅತೀ ಶೀಘ್ರದಲ್ಲಿ ಅಗ್ನಿ ಶಾಮಕ ದಳ ಸ್ಥಾಪಿಸಲಾಗುವುದು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಗುರುವಾರ ಪಡುಬಿದ್ರಿ ಗ್ರಾಪಂಗೆ ವಿವಿಧ ಅನುದಾನಗಳ ಮೂಲಕ ಸುಮಾರ್ ೧.೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ೪ ಸಾವಿರ ಚದರಡಿಯ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಡುಬಿದ್ರಿ ಪ್ರಮುಖ ಸಮಸ್ಯೆಯಾದ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಪೂರೈಸಲು ಉನ್ನತ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದ ಅವರು ಒಳ ಚರಂಡಿ ವ್ಯವಸ್ಥೆ ಹಾಗೂ ಎಸ್‌ಎಲ್‌ಆರ್‌ಎಮ್ ಘಟಕವನ್ನು ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುವುದು ಎಂದವರು ಹೇಳಿದರು.
ಗ್ರಾಪಂ ಕಛೇರಿ ಆಧುನೀಕರಣಗೊಂಡಿದ್ದು, ಸಭಾಭವನಕ್ಕೆ ಸೂಕ್ತ ಪೀಠೋಪಕರಣ ವ್ಯವಸ್ಥೆ ಕಲ್ಪಿಸುವಂತೆ ಯುಪಿಸಿಎಲ್ ಅದಾನಿ ಮುಖ್ಯಸ್ಥರಾದ ಕಿಶೋರ್ ಆಳ್ವರಿಗೆ ಮನವಿ ಮಾಡಿದರು.

ಗ್ರಾಪಂ ಸಭಾಭವನವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪಂಚಾಯಿತಿ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದರೆ ರಾಮರಾಜ್ಯ ಸಾಧ್ಯ. ಈ ಹಿನ್ನೆಲೆಯಲ್ಲಿ ಪಡುಬಿದ್ರಿ ಗ್ರಾಪಂ ಕಛೇರಿ ಕಟ್ಟಡ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದಾಗಿ ಹೇಳಿ, ಜನಪ್ರತಿನಿಧಿಗಳು, ಅಧಿಕಾರಿಗಳು ಕೊಂಡಿಯAತೆ ಕಾರ್ಯನಿರ್ವಹಿಸಿದರೆ ಗ್ರಾಮಾಭಿವೃದ್ಧಿ ಸುಲಲಿತವಾಗುತ್ತದೆ ಎಂದರು.

ಅದಾನಿ-ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ ಗ್ರಾಪಂ ಅಮೃತಶಿಲೆ ನಾಮಫಲಕ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಗೇಟ್‌ವೇಯಾಗಿ ಪಡುಬಿದ್ರಿ ಗುರುತಿಸಿಕೊಂಡಿದ್ದು, ಹೈಟಕ್ ಸಿಟಿಯಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಅದಾನಿ ಕಂಪನಿಯು ಸದಾ ಸ್ಪಂದಿಸುತ್ತಿದ್ದು, ಪಡುಬಿದ್ರಿ ಸಹಿತ ಆಸುಪಾಸಿನ ೮ ಗ್ರಾಪಂಗಳಿಗೆ ತಲಾ ರೂ.೩ ಕೋಟಿಯಂತೆ ೨೪ ಕೋಟಿ ವ್ಯಯಿಸಿದೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ನಿರ್ಮಾಣಗಳಿಗೆ ಪ್ರಮುಖ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿ ಕಳೆದ ೭ ತಿಂಗಳಿAದ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲದ ಕಾರಣ ಯುಪಿಸಿಎಲ್ ಘಟಕವು ಸ್ಥಗಿತಗೊಂಡಿದ್ದು, ವಾರದಿಂದೀಚೆಗೆ ಕಂಪನಿಯ ಒಂದು ಘಟಕ ಕಾರ್ಯಾರಂಭ ಮಾಡಿದೆ ಎಂದರು.
ಮುಖ್ಯ ಅತಿಥಿ ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿ, ಪಡುಬಿದ್ರಿ ಗ್ರಾಪಂಗೆ ಸೊಸೈಟಿ ವತಿಯಿಂದ ಈಗಾಗಲೇ ೫.೫೦ ಲಕ್ಷ ರೂ. ವೆಚ್ಚದ ಕಸ ಸಾಗಾಟದ ವಾಹನ ನೀಡಿದ್ದು, ನೂತನ ಕಛೇರಿಯ ಪೀಠೋಪಕರಣ ಖರೀದಿಗೆ ಸೊಸೈಟಿ ವತಿಯಿಂದ ರೂ.೨ ಲಕ್ಷ ನೀಡುವುದಾಗಿ ಘೋಷಿಸಿದರು.
ವಿವಿಧ ಅನುದಾನ ಜೋಡನೆ: ಕಟ್ಟಡ ಕಾಮಗಾರಿಗೆ ಯುಪಿಸಿಎಲ್ ವತಿಯಿಂದ ೫೭ ಲಕ್ಷ, ಶಾಸಕ ಮೆಂಡನ್‌ರವರಿAದ ೧೦ ಲಕ್ಷ, ಸಚಿವ ಕೋಟ ಶ್ರೀನಿವಾಸ ಪೂಜಾರಿಯಿಂದ ೧೦ ಲಕ್ಷ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರಿಂದ ೧೦ ಲಕ್ಷ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್‌ರಿಂದ ೩ ಲಕ್ಷ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿಯ ೨ ಲಕ್ಷ, ತಾಪಂ ಸದಸ್ಯ ದಿನೇಶ್ ಪಲಿಮಾರ್‌ರವರ ೨ ಲಕ್ಷ ಸಹಿತ ವಿವಿಧ ಅನುದಾನಗಳನ್ನು ಬಳಸಲಾಗಿತ್ತು.

ಸನ್ಮಾನ: ಇದೇ ಸಂದರ್ಭ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಲಾಲಾಜಿ ಆರ್.ಮೆಂಡನ್, ವಿನಯಕುಮಾರ್ ಸೊರಕೆ, ಕಿಶೋರ್ ಆಳ್ವ, ನೀತಾ ಗುರುರಾಜ್, ಶಶಿಕಾಂತ್ ಪಡುಬಿದ್ರಿ, ವೈ.ಸುಧೀರ್ ಕುಮಾರ್, ದಮಯಂತಿ ವಿ.ಅಮೀನ್, ಡಾ.ದೇವಿಪ್ರಸಾದ್ ಶೆಟ್ಟಿ, ಸಹಿತ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆ ವಹಿಸಿದ್ದು, ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು.

ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ಸ್ವಾಗತಿಸಿ ಪ್ರಸ್ತಾವಿಸಿದರು. ಜೇಸಿಐ ಇಂಡಿಯಾದ ರಾಷ್ಟಿçÃಯ ತರಬೇತುದಾರ ರಾಜೇಂದ್ರ ಭಟ್ ಕೆ.ಕಾರ್ಯಕ್ರಮ ನಿರ್ವಹಿಸಿದರು. ಸೇವಂತಿ ಸದಾಶಿವ್ ಮತ್ತು ವೀಣಾ ಪ್ರಾರ್ಥಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಸ್ವಾಮಿ ಕೆರಿಮಠ ವಂದಿಸಿದರು.

ಸಮಾರAಭದಲ್ಲಿ ಸರ್ದಾರ್ ವಲ್ಲಭ ಭಾಯಿ ಪಠೇಲ್ ಜನ್ಮ ದಿನಾಚರಣೆ ಹಾಗೂ ಇಂದಿರಾ ಗಾಂಧಿಯವರ ಪುಣ್ಯತಿಥಿ ಅಂಗವಾಗಿ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.