ನೂತನ ವಧೂವರರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶೀರ್ವಾದ

ಮೂಲ್ಕಿ; ಮೂಲ್ಕಿಯ ಸುವರ್ಣ ಆಟ್ರ್ಸ್ ಮಾಲೀಕ ಚಂದ್ರಶೇಖರ ಸುವರ್ಣ-ಚಿತ್ರ ಸುವರ್ಣ ದಂಪತಿಯ ಸುಪುತ್ರಿ ದೀಕ್ಷಾ ಮತ್ತುಮನೀಶ್‍ರವರ ವಿವಾಹವು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆದ ಸಂದರ್ಭ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮತ್ತು ಮೂಲ್ಕಿ-ಕಿಲ್ಪಾಡಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್ ಭಟ್‍ರವರು ಭೇಟಿ ನೀಡಿ ನೂತನ ವಧೂವರರನ್ನು ಆಶೀರ್ವದಿಸಿದರು.

ಇದೇ ಸಂದರ್ಭ ದೇವಳದ ಆಡಳಿಯ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿಯವರು ಶ್ರೀ ಚಂದ್ರಶೇಖರ ಸ್ವಾಮೀಜಿಯವರನ್ನು ದೇವಳದ ವತಿಯಿಂದ ವಿಶೇಷವಾಗಿ ಗೌರವಿಸಿದರು.

ಈ ಸಂದರ್ಭ ದೇವಳದ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ನಾಗೇಶ್ ಬಪ್ಪನಾಡು, ಗಗನ್ ಸುವರ್ಣ, ಶವಶಂಕರ್, ಕಾರ್ತಿಕ್ ಬಪ್ಪನಾಡು, ಪುನೀತ್‍ಕೃಷ್ಣ ಉಪಸ್ಥಿತರಿದ್ದರು.