ನೂತನ ತಾ. ಪಂ. ಅಧ್ಯಕ್ಷೆಯಾಗಿ ಆಯ್ಕೆಯಾದ ನೀತಾ ಗುರುರಾಜ್ ಸಮ್ಮಾನ

ಪಡುಬಿದ್ರಿ ದೇವಾಡಿಗ ಸಂಘ(ರಿ), ಹಾಗೂ ಅದರ ಮಹಿಳಾ ಸಂಘಟನೆಯ ಮೂಲಕ ಸಂಘದ ಕಚೇರಿಯಲ್ಲಿ ಜಾನಪದ ಚಿಂತಕ ಸದಾನಂದ ಪಿ. ಕೆ., ಹಿರಿಯರಾದ ರಮಾಕಾಂತ ದೇವಾಡಿಗ ಅವರ ಉಪಸ್ಥಿತಿಯಲ್ಲಿ ನೂತನ ತಾ. ಪಂ. ಅಧ್ಯಕ್ಷೆಯಾಗಿ ಆಯ್ಕೆಯಾದ ನೀತಾ ಗುರುರಾಜ್ ಅವರನ್ನು ಸಮ್ಮಾನಿಸಲಾಯಿತು. ದೇವಾಡಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಂದಾ ವಿಜಯ್, ರೇಶ್ಮಾ ಮತ್ತಿತರರು ಇದ್ದರು.