ನಿಹಾಲ್ ಸ್ಟ್ರೈಕರ್ಸ್ ಕೊಲ್ನಾಡು ತಂಡಕ್ಕೆ ಕೆಎಫ್‍ಸಿ ಟ್ರೋಫಿ-2019

ಮೂಲ್ಕಿ: ಕಾರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ನಡೆದ ಸೀಮಿತ ಓವರುಗಳ ಗ್ರಾಮೀಣ ಮಟ್ಟದ ದ.ಕ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ನಿಹಾಲ್ ಸ್ಟ್ರೈಕರ್ಸ್ ಕೊಲ್ನಾಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕಾರ್ನಾಡು ಗಾಂಧಿ ಮೈದಾನದಲ್ಲಿ ನಡೆದ ಟೂರ್ನಿಯ ಅಂತಿಮ ರೋಮಾಂಚಕ ಪಂದ್ಯದಲ್ಲಿ ನಿಹಾಲ್ ಸ್ಟ್ರೈಕರ್ಸ್ ತಂಡವು ಸ್ಪಾನ್ ಮೆರೈನ್ ಮೂಲ್ಕಿ ತಂಡವನ್ನು ಸೋಲಿಸಿದೆ.

ಅಂತಿಮ ಪಂದ್ಯದಲ್ಲಿ ಎರಡು ತಂಡಗಳ ರನ್ನುಗಳ ಸಮಬಲವಾಗಿದ್ದು ಪಂದ್ಯಾಟದ ನಿಯಮದ ಪ್ರಕಾರ ನಾಣ್ಯಚಿಮ್ಮುಗೆ ಮುಖಾಂತರ ಅದೃಷ್ಟ ಕೊಲ್ನಾಡು ಸ್ಟ್ರೈಕರ್ಸ್ ತಂಡದ ಪಾಲಾಗಿ `ಕೆಎಫ್‍ಸಿ-2019′ ಟ್ರೋಫಿ ಹಾಗೂ ನಗದನ್ನು ತನ್ನದಾಗಿಸಿಕೊಂಡರೆ ಸ್ಪಾನ್ ಮೆರೈನ್ ಮೂಲ್ಕಿ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಅಂತಿಮ ಪಂದ್ಯದ ಪಂದ್ಯಪುರುಷೋತ್ತಮ ಹಾಗೂ ಟೂರ್ನಿಯ ಉತ್ತಮ ಎಸೆತಗಾರರಾಗಿ ಸ್ಟ್ರೈಕರ್ಸ್ ತಂಡದ ಡೆರಿನ್ ಹಾಗೂ ಹನೀಫ್ ಪ್ರಶಸ್ತಿ ಪಡೆದರೆ ಟೂರ್ನಿಯ ಸರಣಿಶ್ರೇಷ್ಠ,ಉತ್ತಮ ದಾಂಡಿಗ ಪ್ರಶಸ್ತಿ ಸ್ಪಾನ್ ಮೂಲ್ಕಿ ತಂಡದ ಶರತ್,ಯಶವಂತ್ ಪಡೆದರು.
ಉಪಾಂತ್ಯ ಪಂದ್ಯಗಳಲ್ಲಿ ನಿಹಾಲ್ ಕೊಲ್ನಾಡು ತಂಡವು ಪಿಸಿಪಿ ಪಡುಪಣಂಬೂರು ತಂಡವನ್ನುಹಾಗೂ ಸ್ಪಾನ್ ತಂಡವು ವಿಆರ್ ಸ್ಟ್ರೈಕರ್ಸ್ ಪಂಜಿನಡ್ಕ ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ತೇರ್ಗಡೆಯಾಗಿದ್ದವು.

ಪಂದ್ಯಾಟ ನಡೆದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಲ್ಫ್ ಉದ್ಯಮಿ ಫೈಝಲ್ ಮಂಗಳೂರು,ಸಾದಿಕ್ ದರ್ಗಾರೋಡ್ ಕಾರ್ನಾಡ್,ಸುನಿಲ್ ಕುಬೆವೂರು,ಇಕ್ಬಾಲ್ ದರ್ಗಾರೋಡ್,ಸರ್ಫರಾಜ್ ದರ್ಗಾರೋಡ್,ಸಿರಾಜ್ ಕಿಲ್ಪಾಡಿ,ಪಂದ್ಯಾಟದ ಸಂಘಟಕರಾದ ಹನೀಫ್ ಕಾರ್ನಾಡು ಉಪಸ್ಥಿತರಿದ್ದು