ನಿವೃತ್ತ ಶಿಕ್ಷಕ ಶೇಖ್ ಇಸ್ಮಾಯಿಲ್ ಮಾಸ್ಟರ್‍ರಿಗೆ ಗೌರವಾರ್ಪಣೆ

ಪಡುಬಿದ್ರಿ: ಯೂತ್‍ಫೌಂಡೇಶನ್ ಪಡುಬಿದ್ರಿ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕ ಶೇಖ್ ಇಸ್ಮಾಯಿಲ್ ಮಾಸ್ಟರ್ ಅವರನ್ನು ಪಡುಬಿದ್ರಿ ಉರ್ದು ಶಾಲಾ ಸಭಾಂಗಣದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಹಸನ್ ಬಾವ, ಬುಡಾನ್ ಸಾಹೇಬ್, ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಸಯ್ಯದ್ ಸಫಿಯುಲ್ಲಾ, ಹಿಮಾಯತುಲ್ ಇಸ್ಲಾಂ ಸಂಘದ ಕೋಶಾಧಿಕಾರಿ ಅಕ್ಬರ್, ಹಾಜಿ ಹಮ್ಮಬ್ಬ ಮೊಯಿದಿನ್, ಸಂಸ್ಥೆಯ ಉಪಾಧ್ಯಕ್ಷ ಮನ್ಸೂರ್ ಎಂ.ಎಸ್, ಕಾರ್ಯದರ್ಶಿ ರಝಾಕ್ ಕಂಚಿನಡ್ಕ, ಕೋಶಾಧಿಕಾರಿ ರಮೀಝ್ ಹುಸೈನ್, ಜತೆಕಾರ್ಯದರ್ಶಿ ನಿಯಾಝ್, ಎ.ಎಚ್.ಅಬ್ದುಲ್ ಖಾದರ್ ಉಪಸ್ಥಿತರಿದ್ದರು.