ನಿಧನ : ಹೊನ್ನಯ್ಯ ದೇವಾಡಿಗ (Honnaya Devadiga)

ಪಡುಬಿದ್ರಿ: ಯಕ್ಷಗಾನ ಕಲಾವಿದ, ಪಡುಬಿದ್ರಿಯ ಎಸ್‍ಬಿವಿಪಿ ಹಿ. ಪ್ರಾ. ಶಾಲೆಯಲ್ಲಿ 30ವರ್ಷಗಳ ಕಾಲ ಜವಾನರಾಗಿ ಸೇವೆಯನ್ನು ಸಲ್ಲಿಸಿದ್ದ ಪಡುಬಿದ್ರಿಯ ಅಬ್ಬೇಡಿಯವರಾಗಿದ್ದು ಸುಜ್ಲಾನ್ ಪುನರ್ವಸತಿ ಕಾಲನಿಯಲ್ಲಿ ವಾಸವಿದ್ದ ಹೊನ್ನಯ್ಯ ದೇವಾಡಿಗ(76) ಆ. 20ರಂದು ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇಗುಲದಲ್ಲಿ ದೇವರ ಚಾಕರಿ ನಿರತರಾಗಿದ್ದ ಇವರು ದೀವಟಿಗೆ ಸೇವೆ ನಿರ್ವಹಿಸುತ್ತಿದ್ದರು. ಶ್ರೀ ದೇವಸ್ಥಾನದ ಶ್ರೀ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಸ್ಥಾಪನೆಗೆ ಇವರೂ ಒಬ್ಬ ಕಾರಣಕರ್ತರಾಗಿದ್ದರು. ಯಕ್ಷಗಾನದ ಹೆಜ್ಜೆಗಾರಿಕೆಯನ್ನು ದಿ. ಪಡ್ರೆ ಚಂದು ಅವರಲ್ಲಿ ಅಭ್ಯಸಿಸಿದ್ದ ಹೊನ್ನಯ್ಯ ದೇವಾಡಿಗ ಅವರು ಬಣ್ಣದ ವೇಷಧಾರಿಯಾಗಿ ಮಹಿಷಾಸುರ, ವೀರಭದ್ರ ಸಹಿತ ಸ್ತ್ರಿ ಪಾತ್ರಗಳನ್ನೂ ಲೀಲಾಜಾಲವಾಗಿ ನಿಭಾಯಿಸಬಲ್ಲರಾಗಿದ್ದರು.