ನಿಧನ: ಹೆಜಮಾಡಿ ಸುಂದರಿ ಆರ್.ಬಂಗೇರ (Sundari R Bangera)

ಪಡುಬಿದ್ರಿ: ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ವಾಸುದೇವ ಆರ್.ಕೋಟ್ಯಾನ್‍ರವರ ತಾಯಿ, ಮುಂಬೈ ವಿಲೇ ಪಾರ್ಲೆ ನಿವಾಸಿ ಸುಂದರಿ ಆರ್.ಬಂಗೇರ(89) ಹೃದಯಾಘಾತದಿಂದ ಎ.14ರಂದು ಮುಂಬೈಯಲ್ಲಿ ನಿಧನರಾದರು.ಮೂಲತಃ ಹೆಜಮಾಡಿ ನ್ಯೂ ಲಕ್ಷ್ಮೀ ಹೌಸ್‍ನವರಾದ ಅವರು ಇನ್ನ ಬೈಲುಮನೆ ಕುಟುಂಬದ ಹಿರಿಯರಾಗಿದ್ದರು.

ಅವರಿಗೆ ವಾಸುದೇವ ಆರ್.ಕೋಟ್ಯಾನ್ ಸಹಿತ 3 ಪುತ್ರ,3 ಪುತ್ರಿ ಇದ್ದಾರೆ.
ಸಾಮಾಜಿಕ, ಧಾರ್ಮಿಕ ಸೇವಾಸಕ್ತರಾದ ಸುಂದರಿ ಬಂಗೇರರವರು ಹುಟ್ಟೂರಿನ ಧಾರ್ಮಿಕ,ಸಾಮಾಜಿಕ ಸಂಸ್ಥೇಗಳಿಗೆ ಸಹಾಯಹಸ್ತ ನೀಡುತ್ತಿದ್ದರಲ್ಲದೆ,ಇನ್ನ ಬೈಲುಮನೆ ಕುಟುಂಬದ ದೈವಸ್ಥಾನದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದರು.