ನಿಧನ: ಹೆಚ್. ಬಿ. ಉಸ್ಮಾನ್ ಹಾಜಿ ಬೆರ್ನಹಿತ್ಲು

ನಿಧನ: ಹೆಚ್. ಬಿ. ಉಸ್ಮಾನ್ ಹಾಜಿ ಬೆರ್ನಹಿತ್ಲು
ಪಡುಬಿದ್ರಿ: ಹಿರಿಯ ಸಾಮಾಜಿಕ ಮುತ್ಸದ್ದಿ, ಸಮುದಾಯದ ಹಿರಿಯ ನಾಯಕ ಹೆಜಮಾಡಿ ಎಸ್.ಎಸ್. ರೋಡ್ ನಿವಾಸಿ ಹೆಚ್. ಬಿ. ಉಸ್ಮಾನ್ ಹಾಜಿ ಬೆರ್ನಹಿತ್ಲು(೭೫) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು.

ಮೃತರಿಗೆ ಪತ್ನಿ, ನಾಲ್ಕು ಗಂಡು, ಮೂವರು ಪುತ್ರಿಯರಿದ್ದಾರೆ.
ಕೊಯಾಲಿ ಆಂಡ್ ಕಂಪೆನಿಯ ಪಾಲುದಾರರಾಗಿದ್ದ ಅವರು, ಕನ್ನಂಗಾರ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡಿದ್ದರು.