ನಿಧನ: ಹರಿಣಾಕ್ಷಿ ಭಟ್ ಶಿಮಂತೂರು (Harinakhsi Bhat Simatoor)

ಮೂಲ್ಕಿ: ಶಿಮಂತೂರು ದೇವಳದ ಮೊಕ್ತೇಸರ,ಜ್ಯೋತಿಷಿ ರಾಮಚಂದ್ರ ಭಟ್‍ರವರ ಧರ್ಮಪತ್ನಿ ಹರಿಣಾಕ್ಷಿ ಭಟ್(66) ಹೃದಯಾಘಾತದಿಂದ ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಶಿಮಂತೂರು ದೇವಳದ ಭಜನೆ ಸಹಿತ ಪ್ರತಿಯೊಂದು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅವರು ತಮ್ಮ ಕ್ರೀಯಾಶೀಲತೆ ಹಾಗೂ ದಾನಧರ್ಮಗಳಿಂದ ಹೆಸರುವಾಸಿಯಾಗಿದ್ದರು.

ಅವರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ,ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್,ಮಾಜಿ ಶಾಸಕ ಅಭಯಚಂದ್ರ ಜೈನ್,ಶಿಮಂತೂರು ದೇವಳದ ಆಡಳಿತ ಮೊಕ್ತೆಸರ ಉದಯ ಕುಮಾರ್ ಶೆಟ್ಟಿ,ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು,ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ,ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ,ಜ್ಯೋತಿಷಿ ಉಷಾ ವಿಶ್ವನಾಥ ಭಟ್,ಶ್ರೀ ಚಂದ್ರಶೇಖರ ಸ್ವಾಮಿಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್,ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ದೇವಪ್ರಸಾದ ಪುನರೂರು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿ ಅಂತಿಮ ನಮನ ಸಲ್ಲಿಸಿದರು.