ನಿಧನ: ಸ್ವರ್ಣೋದ್ಯಮಿ ರಮೇಶ್ ಆಚಾರ್ಯ (Ramesh Acharya)

ಪಡುಬಿದ್ರಿ:  ವಿಶ್ವಕರ್ಮ ಸಮಾಜದ ಹಿರಿಯರೂ, ಪರಂಪರೆಯ ಸ್ವರ್ಣೋದ್ಯಮಿ, ಪಡುಬಿದ್ರಿಯ ದುರ್ಗಾಪ್ರಸಾದ್ ಜ್ಯುವೆಲ್ಲರ್ಸ್ ಮತ್ತು ಸಿಲ್ವರ್ ಹೌಸ್‍ನ ಮಾಲಕ ರಮೇಶ್ ಆಚಾರ್ಯ(79) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು.
ಪಡುಬಿದ್ರಿಯಲ್ಲಿ ವಿಶ್ವಕರ್ಮ ಸಮಾಜಕ್ಕೊಳಪಟ್ಟ ಶ್ರೀ ದುರ್ಗಾದೇವಿ ಮಂದಿರದ ಸ್ಥಾಪನೆಗಾಗಿ ಶ್ರಮಿಸಿದ್ದ ರಮೇಶ ಆಚಾರ್ಯರು ಮಂದಿರದ ಮಾಜಿ ಅಧ್ಯಕ್ಷರಾಗಿದ್ದರು. ಪಡುಬಿದ್ರಿ ಜೇಸಿಐನ ಹಿರಿಯ ಸ್ಥಾಪಕ ಸದಸ್ಯರಾಗಿ ಪ್ರತೀ ಸ್ವಾತಂತ್ರ್ಯ ದಿನದಂದು ವಿವಿಧ ಶಾಲಾ ಮಕ್ಕಳಿಗೆ ಜೇಸಿಐ ಮೂಲಕ ಸಿಹಿ ಹಂಚುತ್ತಿದ್ದರು.ಪಡುಬಿದ್ರಿ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರ ಅಧ್ಯಕ್ಷಾವಧಿಯಲ್ಲಿ ಸಂಸ್ಥೆಯು ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿತ್ತು. ಪಡುಬಿದ್ರಿ ಲಯನ್ಸ್ ಶೈಕ್ಷಣಿಕ ಟ್ರಸ್ಟ್‍ನ ಕೋಶಾಧಿಕಾರಿಗಳಾಗಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ಸ್ವತಹ 50ಸೆಂಟ್ಸು ಜಾಗದ ಭೂದಾನವನ್ನೂ ಗೈದಿದ್ದರು. ಎಸ್‍ಕೆಐಜಿ ಸೊಸೈಟಿಯ ಮಾಜಿ ನಿರ್ದೇಶಕರಾಗಿದ್ದ ಇವರು ಪಡುಬಿದ್ರಿಯ ಸಮೃದ್ಧಿ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.