ನಿಧನ: ಶಶಿಧರ್ ಎಮ್

ಪಡುಬಿದ್ರಿ: ಉದ್ಯಾವರ ದಿ.ಮಹಾಬಲ ತಿಂಗಳಾಯರ ಪುತ್ರ, ಸುರತ್ಕಲ್ ಶಾರದಾ ಬುಕ್ ಸೆಂಟರ್ ಮಾಲೀಕ ಶಶಿಧರ್ ಎಮ್.(60) ಕಿಡ್ನಿ ವೈಫಲ್ಯದಿಂದ ಬುಧವಾರ ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅತ್ಯುತ್ತಮ ಕ್ರೀಡಾಪಟುವಾಗಿದ್ದ ಅವರು ವಿದೇಶದಲ್ಲಿ ಉದ್ಯೋಗಿಯಾಗಿದ್ದು, ಬಳಿಕ ಸುರತ್ಕಲ್‍ನಲ್ಲಿ ಶಾರದಾ ಬುಕ್ ಸೆಂಟರ್ ಆರಂಭಿಸಿದ್ದರು.

ಅವರಿಗೆ ಪತ್ನಿ ನ್ಯಾಯವಾದಿ ರೇಖಾ ಶಶಿಧರ್ ಹಾಗು ಇಬ್ಬರು ಪುತ್ರರು ಇದ್ದಾರೆ.

ಗುರುವಾರ ಅವರ ಮಾವ ಲಕ್ಷ್ಮಣ ಸುವರ್ಣರ ಮನೆ ಹೆಜಮಾಡಿ ಕೋಡಿಯ ಶ್ರಿಮಾತಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.