ನಿಧನ: ವಿಜಯ ಬ್ಯಾಂಕ್ ನಿವೃತ್ತ ಎಜಿಎಮ್ ಶೇಖರ ಶೆಟ್ಟಿ

ಮೂಲ್ಕಿ: ವಿಜಯಾ ಬ್ಯಾಂಕ್ ನಿವೃತ್ತ ಎಜಿಎಮ್, ಮೂಲ್ಕಿ ಸಮೀಪದ ಅತಿಕಾರಿಬೆಟ್ಟು-ಮೊೈಲೊಟ್ಟು ನಿವಾಸಿ ಶೇಖರ ಶೆಟ್ಟಿ(68) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾದರು.

ಸರಳ ಸಜ್ಜನಿಕೆ, ಪರೋಪಕಾರಿ ಹಾಗೂ ಕೊಡುಗೈ ದಾನಿಯಾಗಿ ಗ್ರಾಮದಲ್ಲಿ ಜನಾನುರಾಗಿಯಾಗಿದ್ದ ಅವರು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರದಲ್ಲಿ ಸಹಕರಿಸಿದ್ದರು.

ಮೊೈಲೊಟ್ಟು, ಮೂಲ್ಕಿ, ಅಹಮದಾಬಾದ್, ಮಂಗಳೂರು, ಮುಂಬೈ, ಕೊಲ್ಕತ್ತಾ ಹಾಗೂ ದೆಹಲಿಗಳಲ್ಲಿ ವಿಜಯಾ ಬ್ಯಾಂಕ್‍ನಲ್ಲಿ ಸೇವೆ ಸಲ್ಲಿಸಿದ್ದ ಅವರಿಗೆ ವಿಜಯಾ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ ರಂಜನಾ ಶೆಟ್ಟಿ(ಪತ್ನಿ) ಹಾಗೂ ಇಬ್ಬರು ಪುತ್ರಿಯರಿದ್ದಾರೆ.