ನಿಧನ – ಮತ್ಸ್ಯೋದ್ಯಮಿ ವೈ.ವಾಸುದೇವ ಸುವರ್ಣ (Y Vasudeva Suvarna)

ಪಡುಬಿದ್ರಿ: ಮತ್ಸ್ಯೋದ್ಯಮಿಯಾಗಿ ಹೆಸರುವಾಸಿಯಾಗಿದ್ದ ಎರ್ಮಾಳು ತೆಂಕ ಮೊಗವೀರ ಸಮಾಜದ ಹಿರಿಯರಾದ ಎರ್ಮಾಳು ವಾಸುದೇವ ಸುವರ್ಣ(80) ಅಸೌಖ್ಯದಿಂದ ಮಂಗಳವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಎರ್ಮಾಳು ಶ್ರೀ ರಾಮ ಮಂದಿರದ ನಿರ್ಮಾಣ ಸಂದರ್ಭದಲ್ಲಿ ಮುಂಬಯಿ ಮುಂತಾದ ಮಹಾನಗರಗಳಲ್ಲಿ ದೇಣಿಗೆ ಸಂಗ್ರಹದಲ್ಲಿ ಸಹಕರಿಸಿದ್ದರು. ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡಕ್ಕಾಗಿ 10ಲಕ್ಷ ರೂ. ಗಳ ದೇಣಿಗೆಯನ್ನೂ ನೀಡಿದ್ದರು. ಪಡುಬಿದ್ರಿ ಆಸುಪಾಸಿನಲ್ಲಿ ಜನಾನುರಾಗಿಯಾಗಿದ್ದ ವಾಸುದೇವ ಸುವರ್ಣರು ಪಡುಬಿದ್ರಿ ಜೇಸಿಐ ನ ಸ್ಥಾಪಕ ಸದಸ್ಯರಾಗಿದ್ದರು. ಪಡುಬಿದ್ರಿ ಲಯನ್ಸ್ ಕ್ಲಬ್ಬಿನಲ್ಲೂ ವಿವಿಧ ಹುದ್ದೆಗಳನ್ನು ಅಲಂಕರಿಸಿದವರಾಗಿದ್ದರು.

1980ರ ದಶಕದಲ್ಲಿ ಮುಂಚೂಣಿಯ ಮತ್ಸ್ಯೋದ್ಯಮಿಯಾಗಿ, ಪಟ್ರೋಲ್ ಪಂಪು ಮಾಲಕರಾಗಿದ್ದ ವಾಸುದೇವ ಸುವರ್ಣರು ಐಸ್ ಪ್ಲಾಂಟ್ ಉದ್ಯಮವನ್ನೂ ನಡೆಸಿದ್ದರು. ಕಾಪು ಬ್ಲಾಕ್ ಕಾಂಗ್ಸೆಸ್ ಉಪಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.ಮೃತರ ಅಂತ್ಯ ಸಂಸ್ಕಾರವು ಆ. 22ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವುದು.

ಅವರಿಗೆ ಪತ್ನಿ,ಮೂವರು ಪುತ್ರಿಯರು ಇದ್ದಾರೆ.

Leave a Reply

Your email address will not be published. Required fields are marked *