ನಿಧನ: ಬೆಳಪು ನಡಿಮನೆ ರವಿರಾಜ ರಾವ್

ಪಡುಬಿದ್ರಿ: ಬೆಳಪು ಗ್ರಾಮದ ನಡಿಮನೆ ದಿ.ಮೋಹನ ರಾವ್‍ರವರ ಪುತ್ರ,ಮಹಾರಾಷ್ಟ್ರದ ನಾಂದೇಡ್‍ನ ಹೋಟೆಲ್ “ತಾಜ್ ಪಾಟೀಲ್” ಮಾಲೀಕ ಬೆಳಪು ನಡಿಮನೆ ರವಿರಾಜ ರಾವ್(45) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಾಂದೇಡ್‍ನ ಸ್ವಗೃಹದಲ್ಲಿ ನಿಧನರಾದರು.

ಎಂದಿನಂತೆ ಮಂಗಳವಾರ ಮುಂಜಾನೆ ಜಿಮ್‍ಗೆ ತೆರಳಿದ್ದ ಅವರು ವಾಪಾಸು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿರುವ ಸಂದರ್ಭ ತೀವ್ರ ಹೃದಯಾಘಾತವಾಗಿತ್ತು.ಕಳೆದ 15 ವರ್ಷಗಳಿಂದ ಅವರು ನಾಂದೇಡ್‍ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು.
ಅವರಿಗೆ ತಾಯಿ,ಪತ್ನಿ,ಪುತ್ರ,ಪುತ್ರಿ,ಸಹೋದರಿ,ವಿಕ ಉಚ್ಚಿಲ ವರದಿಗಾರ ವಾದಿರಾಜ ರಾವ್ ನಡಿಮನೆ ಸಹಿತ 4 ಸಹೋದರರು ಇದ್ದಾರೆ.ಅವರ ಅಂತ್ಯಕ್ರಿಯೆ ಹೈದರಾಬಾದ್‍ನಲ್ಲಿ ನಡೆಯಲಿದೆ.