ನಿಧನ: ಪುರೋಹಿತ, ವೈದ್ಯ ರಂಗನ ಭಟ್

ಪಡುಬಿದ್ರಿ: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕರಾದ ರಂಗನ ಭಟ್(75) ಹೃದಯಾಘಾತದಿಂದ ಶನಿವಾರ ಹೆಜಮಾಡಿಯ ಸ್ವಗೃಹ ಸುಂದರ ಭಟ್ ನಿಲಯದಲ್ಲಿ ನಿಧನರಾದರು.

ಅವಿವಾಹಿತರಾಗಿದ್ದ ಅವರು ಹೆಜಮಾಡಿಯ ಎಲ್ಲೆಡೆ ದೈವ, ನಾಗ ಹಾಗೂ ದೇವರ ಸೇವೆಗಳಲ್ಲಿ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಆಯುರ್ವೇದ ಆರ್‍ಎಮ್‍ಪಿ ವೈದ್ಯರಾಗಿ ಸರ್ಪಸುತ್ತು ಮತ್ತು ಹಳದಿ ರೋಗಕ್ಕೆ ಔಷಧ ನೀಡುವ ಮೂಲಕ ಬಹು ಪ್ರಸಿದ್ಧರಾಗಿದ್ದರು.