ನಿಧನ: ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ರಾವ್

ಪಡುಬಿದ್ರಿ: ಬೀಡಿನಕರೆ ಶಾಲೆಯಲ್ಲಿ ಸುಮಾರು 43 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪಡುಬಿದ್ರಿ ಕನ್ನಂಗಾರ್ ನಿವಾಸಿ ರಾಮಚಂದ್ರ ರಾವ್(85) ಅಸೌಖ್ಯದಿಂದ ಡಿ. 23ರಂದು ನಿಧನಹೊಂದಿದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ನಿವೃತ್ತಿಯ ಬಳಿಕ ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಕನ್ನಂಗಾರ್ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾಗಿಯೂ ದುಡಿದಿದ್ದರು.