ನಿಧನ: ದಿನೇಶ್ ಶೆಣೈ (Dinesh Shenoy)

ಪಡುಬಿದ್ರಿ: ಖ್ಯಾತ ಜಿನಸಿ ವ್ಯಾಪಾರಿಯಾಗಿದ್ದ ದಿನೇಶ್ ಶೆಣೈ(58) ಪಡುಬಿದ್ರಿಯ ಸ್ವಗೃಹದಲ್ಲಿ ಸೆ. 6ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಪಡುಬಿದ್ರಿ ಪ್ರಸಿದ್ಧಿ ಪಡೆದ ಪಡುಬಿದ್ರಿ ಕ್ರಿಕೆಟರ್ಸ್‍ನ ಅತ್ಯುತ್ತಮ ಬ್ಯಾಟ್ಸ್‍ಮೆನ್ ಆಗಿದ್ದ ಅವರು ಕ್ರೀಡಾ ಪ್ರೋತ್ಸಾಹಕರಾಗಿದ್ದರು. ಕೊಡುಗೈ ದಾನಿಯಾಗಿದ್ದ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.