ನಿಧನ: ಟೈಲರ್, ಪರಿಸರವಾದಿ, ಕಂಬಳಪ್ರೇಮಿ ಬಾಲಕೃಷ್ಣ ಶೆಟ್ಟಿ (Balakrishna Shetty)

ಪಡುಬಿದ್ರಿ: ನಂದಿಕೂರು ಜನಜಾಗೃತಿ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿ ಪರಿಸರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಾದೆಬೆಟ್ಟು ಬಾಲಕೃಷ್ಣ ಶೆಟ್ಟಿ(64) ಸ್ವಗೃಹದಲ್ಲಿ ಫೆ. 10ರಂದು ನಿಧನರಾದರು.

ಮೃತರಿಗೆ ಪತ್ನಿ ಇದ್ದಾರೆ.

ಟೈಲರ್ ವೃತ್ತಿಯನ್ನು ನಂದಿಕೂರಿನಲ್ಲಿ ನಿರ್ವಹಿಸುತ್ತಿದ್ದ ಇವರು ಕಂಬಳಪ್ರೇಮಿಯೂ ಆಗಿದ್ದರು.ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ಜಿಲ್ಲೆಯಲ್ಲಿ ನೆಲೆಯೂರಲು ಹವಣಿಸಿದ್ದ ಎನ್‍ಟಿಪಿಸಿ,ಕೊಜೆಂಟ್ರಿಕ್ಸ್ ಮತ್ತು ನಾಗಾರ್ಜುನ ಉಷ್ಣ ವಿದ್ಯುತ್ ಯೋಜನೆಗಳ ವಿರುದ್ಧ ಹೋರಾಡಿದ್ದ ಇವರು ಕಾನೂನಿನ ಕುಣಿಕೆಗೊಳಪಟ್ಟಿದ್ದರೂ ತಮ್ಮ ಹೆಜ್ಜೆಯನ್ನು ಹಿಂದಿರಿಸಲಿರಲಿಲ್ಲ.