ನಿಧನ: ಜಯಲಕ್ಷ್ಮೀ ಮೋಹನ ರಾವ್

ಪಡುಬಿದ್ರಿ: ನಂದಿಕೂರು ನಿವಾಸಿ ಜಯಲಕ್ಷ್ಮೀ ಮೋಹನ ರಾವ್(69) ಅಸೌಖ್ಯದಿಂದ ಜ. 2ರಂದು ನಂದಿಕೂರಿನ ಸ್ವಗೃಹದಲ್ಲಿ ನಿಧನರಾದರು.

ಸಮಾಜಮುಖಿ ಚಿಂತನೆಗಳಿಗೆ ಪ್ರೇರಕ ಶಕ್ತಿಯಾಗಿದ್ದ ಜಯಲಕ್ಷ್ಮೀ ರಾವ್ ಅವರು ನಂದಿಕೂರು ಪರಿಸರದಲ್ಲಿ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದ ಭಾಗವತ ಪ್ರತಿಷ್ಠಾನದ ಟ್ರಸ್ಟಿಯಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.
ಅವರಿಗೆ ಯುವ ಸಂಘಟಕ ನಾಗರಾಜ ರಾವ್, ಖ್ಯಾತ ಪಾಕ ಶಾಸ್ತ್ರಜ್ಞ ರಾಘವೇಂದ್ರ ರಾವ್ ಸಹಿತ ನಾಲ್ವರು ಪುತ್ರ, ಪುತ್ರಿ ಇದ್ದಾರೆ.