ನಿಧನ: ಕೆ.ರವೀಂದ್ರ ಆಚಾರ್ಯ

ಮೂಲ್ಕಿ: ಕಾರ್ನಾಡು ಧರ್ಮಸಾನ ಬಳಿಯ ಶಿವರಂಜಿನಿ ನಿವಾಸಿ ಕೆ.ರವೀಂದ್ರ ಆಚಾರ್ಯ(62) ನ.12ರಂದು ಹೃದಯಾಘಾತದಿಂದ ನಿಧನರಾದರು.

ಜ್ಯೋತಿಷಿಯಾಗಿದ್ದ ಅವರು ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಯುವಕ ವೃಂದದ ಹಿರಿಯ ಸದಸ್ಯರೂ, ಭಜನಾ ಮಂಡಳಿಯ ಸಂಚಾಲಕರೂ ಆಗಿದ್ದು, ಮೂಲ್ಕಿಯ ವಿಶ್ವ ಬ್ರಾಹ್ಮಣ ಸಮಾಜ ಸಭಾದ ಕಾರ್ಯದರ್ಶಿಯಾಗಿ, ಮುಂಬೈನ ವಿಶ್ವ ಬ್ರಾಹ್ಮಣ ಸಮಾಜ ಸಂಘದ ಕಾರ್ಯದರ್ಶಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಅವರಿಗೆ ಪತ್ನಿ, ತಾಯಿ, 2 ಪುತ್ರರು, 2 ಸಹೋದರರು ಇದ್ದಾರೆ.