ನಿಧನ: ಕುಮಾರ ಶೆಟ್ಟಿ Kumara Shetty

ಮೂಲ್ಕಿ ಕಿಲ್ಪಾಡಿ ನಿವಾಸಿ ಕುಮಾರ ಶೆಟ್ಟಿ (55) ಮೆದುಳಿನ ತೀವೃ ರಕ್ತಸ್ರಾವದಿಂದ ಗುರುವಾರ ನಿಧನ ಹೊಂದಿದರು.

ಕಳೆದ ಮೂವತ್ತು ವರ್ಷಗಳಿಗೂ ಅಧಿಕ ಜನತಾ ಪರಿವಾರದ ಸದಸ್ಯರಾಗಿ ಮೂಲ್ಕಿ ಪರಿಸರದ ಹಿರಿಯ ಜೆಡಿಎಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಅವಿವಾಹಿತರಾದ ಕುಮಾರ ಶೆಟ್ಟಿಯವರು ಸಿವಿಲ್ ಗುತ್ತಿಗೆದಾರರಾಗಿ, ಮೂಲ್ಕಿ ಪರಿಸರದ ಸಮಾಜ ಸೇವಕರಾಗಿ ಪ್ರಸಿದ್ದರು.