ನಿಧನ ಉದಯ ಕೆ ಕಾಂಚನ್ Udaya K Kanchan

ಪಡುಬಿದ್ರಿ: ಗಜಾನನ ಟೂರಿಸ್ಟ್ ಸಂಸ್ಥೆಯ ಮಾಲಕ,ಚಾಲಕ ಪಡುಬಿದ್ರಿ ನಡಿಪಟ್ಣ ನಿವಾಸಿ, ಉದಯ ಕೆ.ಕಾಂಚನ್(55) ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು.

ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಸದಾ ಶ್ವೇತ ವಸನಧಾರಿಯಾಗಿ ತನ್ನೆಲ್ಲಾ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮೂಲ್ಕಿಯ ಶಾಲೆಯೊಂದರ ವಿದ್ಯಾರ್ಥಿಗಳ ಟ್ರಿಪ್‍ನೊಂದಿಗೆ ಆರಂಭಿಸಿ ಇಂದು ಹತ್ತಿರದ 4 ಶಾಲೆಗಳ ವಿದ್ಯಾರ್ಥಿಗಳ ಶಾಲಾ ಟ್ರಿಪ್ ನಿರ್ವಹಿಸುತ್ತಿದ್ದ ಗಜಾನನ ಟೂರಿಸ್ಟ್ ಸಂಸ್ಥೆಯ ಉದಯ ಕಾಂಚನ್ ಸ್ಥಳೀಯರೆಲ್ಲರ ವಿಶ್ವಾಸಾರ್ಹತೆಗೆ ಪಾತ್ರರಾಗಿದ್ದರು.
ಮೃತರ ನಿಧನಕ್ಕೆ ಪಡುಬಿದ್ರಿಯ ಟೂರಿಸ್ಟ್ ಮ್ಯಾಕ್ಸಿಕ್ಯಾಬ್ ವಾಹನಗಳೆಲ್ಲವೂ ಇಂದು ಹರತಾಳವನ್ನಾಚರಿಸಿದವು.