ನಿಧನ:ಹಿರಿಯ ಕೃಷಿಕ ಸಾಮಾಜಿಕ ಹೋರಾಟಗಾರ ಮಾಡ್ರಗುತ್ತು ಸಂಜೀವ ಶೆಟ್ಟಿ

ಮೂಲ್ಕಿ: ಶಿಮಂತೂರು ನಿವಾಸಿ ಹಿರಿಯ ಕೃಷಿಕ ಸಾಮಾಜಿಕ ಹೋರಾಟಗಾರ ಸಂಜೀವ ಶೆಟ್ಟಿ ಮಾಡ್ರಗುತ್ತು ಸಂಜೀವ ಶೆಟ್ಟಿ(88)ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪುತ್ರಿ, 2 ಪುತ್ರ ಇದ್ದಾರೆ.

ಅವರು ಹಿಂದಿನ ಕಿಲ್ಪಾಡಿ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತರಾಗಿ ರಾಜಕೀಯ ಜೀವನವನ್ನು ಆರಂಭಿಸಿ ಬಳಿಕ ಸಾಮಾಜಿಕ ಹೋರಾಟಗಾರರಾಗಿ ತಮ್ಮ ಮನೆ ಸಮೀಪದ ಎಕರೆಗಟ್ಟಲೆ ಇರುವ ಮಾಡ್ರಗತ್ತು ಕೆರೆಯನ್ನು ಅತಿಕ್ರಮಣ ಮಾಡಿದವರ ವಿರುದ್ದ ಹೋರಾಟ ನಡೆಸಿ ಜಂiÀiಶಾಲಿಯಾಗಿದ್ದರು.

ಓರ್ವ ಕಂಬಳದ ಅಭಿಮಾನಿಯಾಗಿದ್ದ ಅವರು ಸ್ವತಹ ತಾವೇ ಕಂಬಳದಲ್ಲಿ ಭಾಗವಹಿಸಿ ಯುವಕರಿಗೆ ಮಾದರಿಯಾಗಿದ್ದರು. ಕೃಷಿಯಲ್ಲಿನ ಅವರ ಸಾಧನೆಗೆ ಮೂಲ್ಕಿ ಬಂಟರ ಸಂಘದ ವತಿಯಿಂದ ಹಾಗೂ ಶಿಮಂತೂರು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಹೊಸ ಅಂಗಣ ವತಿಯಿಂದ ಅವರನ್ನು ಗೌರವಿಸಲಾಗಿತ್ತು.