ಧಾರ್ಮಿಕತೆಯ ಬಗ್ಗೆ ಜನರಲ್ಲಿ ಭಾವನೆಗಳು ಕಡಿಮೆಯಾಗುತ್ತಿದೆ:ಸಹನಾ ಕುಂದರ್

ಮೂಲ್ಕಿ: ಜೀವನದಲ್ಲಿ ಮೌಲ್ಯಗಳು ಮುಖ್ಯವಾಗಿದ್ದು ಧಾರ್ಮಿಕತೆಯ ಬಗ್ಗೆ ಜನರಲ್ಲಿ ಭಾವನೆಗಳು ಕಡಿಮೆಯಾಗುತ್ತಿದೆ.ದೇಶಭಕ್ತಿ ಎಷ್ಟು ಮುಖ್ಯವೋ ಧರ್ಮ ಭಕ್ತಿ ಅಷ್ಟೇ ಮುಖ್ಯ ಎಂದು ಉಡುಪಿಯ ಯುವ ನ್ಯಾಯವಾದಿ ಸಹನಾ ಕುಂದರ್ ಸೂಡ ಹೇಳಿದರು.

ಮೂಲ್ಕಿ-ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿಯ ನೇತೃತ್ವದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಗುರುವಾರ ರಾತ್ರಿ ನಡೆದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾರಂಭದಲ್ಲಿ ಅವರು ಮುಖ್ಯ ಧಾರ್ಮಿಕ ಭಾಷಣಗಾರರಾಗಿ ಮಾತನಾಡಿದರು.

ಪ್ರಪಂಚದ ಜನರಲ್ಲಿ ಮತ್ಸರ ಜಾಸ್ತಿ ಇದ್ದು ಅದು ನಮ್ಮನ್ನೇ ಸುಡುತ್ತದೆ.ಪ್ರಪಂಚದ ಬದಲಾವಣೆ ಮಹಿಳೆಯರಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ ವಹಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಘವೇಂದ್ರ ಭಟ್,ಯುವ ಉದ್ಯಮಿ ಹರೀಶ್ ಮುದರಂಗಡಿ,ಮೂಲ್ಕಿ ನ.ಪಂ.ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್,ಸದಸ್ಯರಾದ ಹರ್ಷರಾಜ ಶೆಟ್ಟಿ ಜಿ.ಎಮ್.,ಹರಿಹರ ಯುವಕ ವೃಂದದ ಅಧ್ಯಕ್ಷ ವಸಂತ್ ಕೋಟ್ಯಾನ್,ಕಾರ್ಯದರ್ಶಿ ಪ್ರಕಾಶ್ ಮಂಜಟ್ಟೆ,ಕೋಶಾಧಿಕಾರಿ ಭಾಸ್ಕರ್ ಎನ್.ಸುವರ್ಣ,ಮಹಿಳಾ ಮಂಡಳಿಯ ಅಧ್ಯಕ್ಷೆ ಶೋಭಾ ಸುರೇಶ್ ರಾವ್,ಕಾರ್ಯದರ್ಶಿ ಜಾನಕಿ ಅರುಣ್ ಕುಮಾರ್,ಕೋಶಾಧಿಕಾರಿ ಎಂ.ಕಸ್ತೂರಿ ದೇವಾಡಿಗ,ಕಿಶೋರ್,ಸುಧೀರ್ ಆಮೀನ್ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದ ಪಡುಬೈಲು ಮಾಗಂದಡಿ ಭಂಡಾರಮನೆಯ ಗೋಪಾಲ ನಾಯಗರು ಮತ್ತು ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿವೃತ್ತ ಜನರಲ್ ಮ್ಯಾನೇಜರ್ ಉಮೇಶ್ ಆಚಾರ್ಯರವರನ್ನು ಸನ್ಮಾನಿಸಲಾಯಿತು.

ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.ದಾನಿಗಳನ್ನು ಗೌರವಿಸಲಾಯಿತು.

ಹರ್ಷರಾಜ ಶೆಟ್ಟಿ ಸ್ವಾಗತಿಸಿದರು.ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.ಸುದರ್ಶನ್ ಭಟ್ ಧನ್ಯವಾದ ಅರ್ಪಿಸಿದರು.ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.