ಧನ್ವಂತರಿ ರಸ್ತೆ ಅಶ್ವತ್ಥಕಟ್ಟೆ ಶನಿಪೂಜಾ ಸಮಿತಿಯ 22ನೇ ವಾರ್ಷಿಕ ಪೂಜೆ

ಪಡುಬಿದ್ರಿ: ಇಲ್ಲಿನ ಧನ್ವಂತರಿ ರಸ್ತೆ ಅಶ್ವತ್ಥಕಟ್ಟೆ ಶನಿಪೂಜಾ ಸಮಿತಿಯ 22ನೇ ವಾರ್ಷಿಕ ಪೂಜೆಯ ಅಂಗವಾಗಿ ಬೋರ್ಡ್ ಶಾಲಾ ಮೈದಾನದ ಬಳಿಯಿರುವ ಅಶ್ವತ್ಥಕಟ್ಟೆಯಲ್ಲಿ ಸಾವಿರಾರು ಭಕ್ತಾಧಿಗಳ ಪಾಲ್ಗೊಳ್ಳುವಿಕೆಯಲ್ಲಿ ಸಾಮೂಹಿಕ ಶನಿಪೂಜೆ ಶನಿವಾರ ನೆರವೇರಿತು.

ಬೆಳಿಗ್ಗೆ 11 ಗಂಟೆಗೆ ಕಾಡಿಪಟ್ನ ವಿಷ್ಣು ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಶನೀಶ್ವರ ಪೂಜಾ ಸಮಿತಿಯವರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಲೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

ಶುಕ್ರವಾರ ಸಂಜೆ 5 ಗಂಟೆಯಿಂದ ರಾತ್ರಿ 12 ರವರೆಗೆ ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿ, ಕಂಚಿನಡ್ಕ ಶ್ರೀ ರಾಘವೇಂದ್ರ ಭಜನಾ ಮಂಡಳಿ, ಪಡುಬಿದ್ರಿ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ ಹಾಗೂ ಪಾದೆಬೆಟ್ಟು ಶ್ರೀ ಗಾಯತ್ರಿ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.