ದೇಶದ ಶಿಕ್ಷಣ ವ್ಯವಸ್ಥೆ ಮಹತ್ತರ ಬದಲಾವಣೆಯಾಗುತ್ತಿದೆ:ಪ್ರದೀಪ್ ಕುಮಾರ್

ಪಡುಬಿದ್ರಿ: ದೇಶದ ಶಿಕ್ಷಣ ವ್ಯವಸ್ಥೆ ಮಹತ್ತರ ಬದಲಾವಣೆಯಾಗುತ್ತಿದ್ದು, ನಮ್ಮ ಸಂಸ್ಕಾರ, ಸಂಸ್ಕøತಿ ಅವನತಿಯತ್ತ ಸಾಗುತ್ತಿದೆ ಎಂದು ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕಾಲೇಜಿನ ವಾಸುದೇವ ಸಭಾಂಗಣದಲ್ಲಿ ಸೋಮವಾರ ನಡೆದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಪ್ರಾಯೋಜಕತ್ವದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಯ ಕನ್ನಡ ಮಾಧ್ಯಮದಲ್ಲಿ ಓದಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುವಾತ ಪಾಲಕರ ಆರೈಕೆ ಜವಾಬ್ದಾರಿ ಹೊಂದಿದ್ದರೆ, ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉನ್ನತ ಉದ್ಯೋಗದಲ್ಲಿರುವವರು ಪಾಶ್ಚಾತ್ಯ ಸಂಸ್ಕøತಿ ಪ್ರಭಾವಿತರಾಗಿ ಪಾಲಕರನ್ನು ಮರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಂಬಂತೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 12 ಅನಾಥಾಶ್ರಮಗಳು ಕಾರ್ಯಾಚರಿಸುತ್ತಿದ್ದು, ಇನ್ನೂ 4 ಅರ್ಜಿಗಳು ಬಾಕಿ ಇವೆ ಎಂದವರು ಹೇಳಿದರು.

ಪಾಶ್ಚಾತ್ಯ ಸಂಸ್ಕøತಿ ಪ್ರಭಾವದಿಂದ ಸಂಸಾರದಲ್ಲಿನ ಸಂಬಂಧಗಳ ಅರಿವಿನ ಕೊರತೆ ಮಕ್ಕಳಲ್ಲಿ ಕಾಣುತ್ತಿದ್ದೇವೆ. ದೇಶದ ಉತ್ತಮ ಪ್ರಜೆಯಾಗಲು 3 ಮಕ್ಕಳನ್ನು ಪಡೆಯುವುದು ಉತ್ತಮ. ಓರ್ವ ದೇಶ ಸೇವೆ, ಇನ್ನೋರ್ವ ಧರ್ಮರಕ್ಷಣೆ ಮತ್ತೋರ್ವ ತಂದೆ ತಾಯಿಗಳ ಆರೈಕೆಗಾಗಿ ಮೀಸಲಾಗಿ ಸಮಾಜದಲ್ಲಿ ಬೆಳೆಸಿದರೆ ದೇಶದ ಸಂಸ್ಕøತಿ ಉಳಿದು ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದೆ ಎಂದರು.
ರಾಮಾಯಣ ಮಹಾಕಾವ್ಯದ ಕುರಿತು ದತ್ತಿ ಉಪನ್ಯಾಸ ನೀಡಿದ ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ, ಆದರ್ಶ ಸ್ವರೂಪ ರಾಮಾಯಣ ಮಹಾಕಾವ್ಯದಲ್ಲಿದೆ. ಕಥೆ, ಕಾವ್ಯ, ಕವನಗಳು ಸಂತೋಷದ ಜೊತೆಗೆ ನಮ್ಮನ್ನು ಚಿಂತನೆಗೆ ಒಳಪಡಿಸುವಂತಿರಬೇಕು ಎಂದು ವಿವರಿಸಿದರು.

ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಡಾ. ಒಲಿವಿಟಾ ಡಿಸೋಜ, ಕನ್ನಡ ಮಾಧ್ಯಮ ವಿಭಾಗ ಮುಖ್ಯಸ್ಥ ಶ್ರೀಕಾಂತ ರಾವ್, ಆಂಗ್ಲ ಮಾಧ್ಯಮ ವಿಭಾಗದ ಲಕ್ಷ್ಮೀ ಉಡುಪ ಉಪಸ್ಥಿತರಿದ್ದರು.

ಉಪನ್ಯಾಸಕ ಡಾ.ಜಯಶಂಕರ ಕಂಗಣ್ಣಾರು ಸ್ವಾಗತಿಸಿದರು. ಪ್ರಭಾಕರ ಜಿ.ಪಿ. ಕಾರ್ಯಕ್ರಮ ನಿರೂಪಿಸಿದರು. ಅಂಕಿತಾ ರಾವ್ ವಂದಿಸಿದರು.

ಫೋಟೋ: ಕ್ಯಾ:ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ ಅವರನ್ನು ಪ್ರದೀಪ್ ಕುಮಾರ್ ಸನ್ಮಾನಿಸಿದರು.