ದೇವಳದ ಸೇವಾ ಕೈಂಕರ್ಯದಲ್ಲಿ ವೃಂದದ ಪಾತ್ರ ಮಹತ್ತರವಾದುದು-ಎನ್‍ಎಸ್ ಮನೋಹರ ಶೆಟ್ಟಿ

ಮೂಲ್ಕಿ: ಕಳೆದ 43 ವರ್ಷಗಳಿಂದ ಬಪ್ಪನಾಡು ದೇವಳದಲ್ಲಿ ಸ್ವಯಂ ಸೇವಾ ಸಂಸ್ಥೆಯಾಗಿ ನಿರಂತರ ದೇವತಾ ಕಾರ್ಯದಲ್ಲಿ ತೊಡಿಸಿಕೊಂಡಿರುವ ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ಸೇವೆ ಮಹತ್ತರವಾದುದು.ದೇವಳದ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ವಹಿಸಿಕೊಂಡು ಸಂಸ್ಥೆಯು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ.ಈ ಸೇವೆಯು ನಿರಂತರ ನಡೆಯುತ್ತಿರಲಿ.ಎಲ್ಲರಿಗೂ ಶ್ರೀ ದೇವಿಯ ಅನುಗ್ರಹವಿರಲಿ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮತ್ತು ಅನುವಂಶಿಕ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಹೇಳಿದರು.

ಶುಕ್ರವಾರ ಶ್ರೀ ಕ್ಷೇತ್ರ ಬಪ್ಪನಾಡು ದೇವಳದ ಮುಂಭಾಗದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ಕಟ್ಟಡದ ಮೇಲ್ಮಹಡಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂಲ್ಕಿಯ ಶಾರದಾ ಇನ್ಫ್ರಾಡಿಸೈನ್(ಇಂಡಿಯಾ) ಪ್ರೈ.ಲಿ.ನ ಆಡಳಿತ ನಿರ್ದೇಶಕ ಜೀವನ್ ಕೆ.ಶೆಟ್ಟಿ ಕಟ್ಟಡ ಉದ್ಘಾಟಿಸಿ ಶುಭ ಹಾರೈಸಿದರು.ಮೂಲ್ಕಿ ಮಯೂರಿ ಫೌಂಡೇಶನ್ ಸಂಸ್ಥಾಪಕ ಜಯ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ,ಧರ್ಮ ಜಾಗೃತಿಯ ಸೇವಾ ಸಂಸ್ಥೆಯು ಸಮಾಜ ಸೇವೆಯೊಂದಿಗೆ ಧಾರ್ಮಿಕ ಸೇವೆಯನ್ನೂ ನೀಡುತ್ತಿರುವುದು ಶ್ಲಾಘನೀಯ.ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡುವ ಸಂಸ್ಥೆಯಾಗಿಯೂ ಗುರುತಿಸಿಕೊಳ್ಳಬೇಕು ಎಂದರು.

ಬಪ್ಪನಾಡು ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ ಮಾತನಾಡಿ,ನಿರಂತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ಯಾವುದೇ ಸಹಕಾರ ನೀಡಲು ಸಿದ್ಧ ಎಂದರು.
ಕಾರ್ನಾಡು ಓಂ ಇಂಡಸ್ಟ್ರೀಸ್‍ನ ದಿನೇಶ್ ಹೆಗ್ಡೆ,ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ,ಉದ್ಯಮಿ ವೆಂಕಟೇಶ್ ಹೆಬ್ಬಾರ್ ಬಪ್ಪನಾಡು,ವೃಂದದ ಅಧ್ಯಕ್ಷ ಬಿ.ಶಿವ ಶೆಟ್ಟಿ,ಗೌರವಾಧ್ಯಕ್ಷ ಮಹೀಮ್ ಆರ್.ಹೆಗ್ಡೆ,ಕಾರ್ಯದರ್ಶಿ ಸತೀಶ್ ಪುತ್ರನ್ ಉಪಸ್ಥಿತರಿದ್ದರು.

ಬಪ್ಪನಾಡು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ರಮೇಶ್ ದೇವಾಡಿಗ ಪ್ರಾರ್ಥಿಸಿದರು.ಖಜಾಂಚಿ ಸಂಜೀವ ದೇವಾಡಿಗ ಸ್ವಾಗತಿಸಿದರು.ಗೌರವಾಧ್ಯಕ್ಷ ಕೆ.ಕೃಷ್ಣ ಆರ್.ಶೆಟ್ಟಿ ಪ್ರಸ್ತಾವಿಸಿದರು.ಲಕ್ಷ್ಮೀಕಾಂತ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಎ.ದೇವಾಡಿಗ ವಂದಿಸಿದರು.